ಸರ್ಕಾರದ ಆಸ್ತಿ ರಾಜಕೀಯ ಪಕ್ಷಕ್ಕೆ..? ಇದು ಚದುರಂಗ ಆಟವೇ..? ಸರ್ಕಾರ ಕಣ್ಣುಮುಚ್ಚಿದೆಯೇ..?
ಇಂಡಿ : ಪಟ್ಟಣದ ಕೇಂದ್ರ ಸ್ಥಾನವಾದ ಬಸವೇಶ್ವರ ವೃತ್ತದಲ್ಲಿರುವ ಟಿ.ಎಮ್.ಸಿ ಸಂಖ್ಯೆ ೫೩೮ ಸರಕಾರದ ಮಾಲೀಕತ್ವದ ಆಸ್ತಿಯಾಗಿದ್ದ ೨೯೯. ೨೧ ಚೌ ಮೀ ಜಾಗವನ್ನು ಖಾಸಗಿಯವರು ತಮ್ಮದಾಗಿಸಿ ಕೊಂಡಿದ್ದಾರೆ. ಹೌದು.. ಈ ಆಸ್ತಿಯನ್ನು ಇಂಡಿ ಜನತಾ ಪಕ್ಷದ ಅಧ್ಯಕ್ಷರಿಗೆ ಸರಕಾರದ ಜಮೀನು ನೀಡಿತ್ತು. ಇಂಡಿ ಉಪವಿಭಾಗಾಧಿಕಾರಿ ಸರಕಾರದ ಆಸ್ತಿಯನ್ನು ಕೇವಲ ಜನತಾಪಕ್ಷದ ಕಾರ್ಯ ಚಟುವಟಿಕೆ ಗಳನ್ನು ನಡೆಸಲು ಉಪಭೋಗದ ಕುರಿತು ಮಂಜುರಾತಿ ನೀಡಿದ್ದು, ಮಂಜುರಾತಿ ಆದೇಶದ ಪ್ರಕಾರ ಅಧ್ಯಕ್ಷ ಜನತಾಪಕ್ಷ ಕೇವಲ ಉಪಭೋಗದಾರರು ಇದ್ದು ಯಾವ ಕಾಲಕ್ಕೂ ಸದರಿ ಆಸ್ತಿಯ ಕಾನೂನು ಸಮ್ಮತಿ ಮಾಲೀಕರು ಇರುವದಿಲ್ಲ ಹಾಗೂ ವರ್ಗಾವಣೆ, ಮಾರಾಟ ಮಾಡುವ ಹಕ್ಕು ಇರುವದಿಲ್ಲ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಆದ್ರೇ, ಸದರಿ ಆಸ್ತಿಯು ಈಗ ಜಯಪ್ರಕಾಶ ನಾರಾಯಣ ಮೊಮೊರಿಯಲ್ ಟ್ರಸ್ಟ ಇಂಡಿ ಹೆಸರಿನ್ನದ್ದು ಮಂಜುರಾತಿಯ ಷರತ್ತುಗಳನ್ನು ಉಲ್ಲಂಘಿಸಿ ಮಾಡಿಕೊಂಡು ಅವ್ಯವಹಾರವಾಗಿರುತ್ತದೆ.
ಅಧ್ಯಕ್ಷರು ಜಯಪ್ರಕಾಶ ನಾರಾಯಣ ಮೊಮೊರಿಲ್ ಟ್ರಸ್ಟ ಖರೀದಿ ವ್ಯವಹಾರವು ಆಕ್ರಮ, ಅನಧೀಕೃತ ಸರಕಾರದ ಆಸ್ತಿಯನ್ನು ಕಬಳಿಸುವ ಪ್ರಯತ್ನ ಎನ್ನುವದು ಮತ್ತು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಸಮವಾಗಿದೆ.
ಆದ್ದರಿಂದ ಸದರಿ ಆಸ್ತಿಯನ್ನು ಜಯಪ್ರಕಾಶ ನಾರಾಯಣ ಮೊಮೊರಿಯಲ್ ಟ್ರಸ್ಟ ಸರಕಾರಕ್ಕೆ ಒಪ್ಪಿಸಬೇಕು. ಇಲ್ಲವಾದಲ್ಲಿ ಸರಕಾರ ಅದನ್ನು ಮರಳಿ ಪಡೆಯಬೇಕು.
ಅದಲ್ಲದೆ ಜಯಪ್ರಕಾಶ ಮೊಮೊರಿಯಲ್ ಟ್ರಸ್ಟನಲ್ಲಿ ಬಹುತೇಕರು ಬಿಜೆಪಿ ಪಕ್ಷದವರಿದ್ದು, ಅದು ಇನ್ನೊಂದು ಮುಡಾ ಪ್ರಕರಣವಾಗುವ ಬದಲು ಸರಕಾರಕ್ಕೆ ಒಪ್ಪಿಸುವ ಕಾರ್ಯವಾಗಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಆ ಜಾಗದಲ್ಲಿ ಮೂರು ಸಣ್ಣ ಅಂಗಡಿಗಳು, ಒಂದು ದವಾಖಾನೆ ಮತ್ತು ಡಿ.ಸಿ.ಸಿ ಬ್ಯಾಂಕ್ ಇದ್ದು, ಅವರಿಗೆ ಕಾಣದ ಕೈಗಳು ಕಿರಿ ಕಿರಿ ಮಾಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ. ಗುಂಡಾಗಿರಿಗೆ ಬಿಜೆಪಿಯ ಹಿರಿಯ ನಾಯಕರ ಬೆಂಬಲ ಇದೆ ಪೀಸುಪೀಸು ಮಾತುಗಳಿವೆ.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಜನತಾ ಪಕ್ಷದ ಕಚೇರಿ