ಸರಕಾರಿ ನೌಕರರ ಸಂಘದ ಚುನಾವಣೆ : ಬಾರಿ ಸ್ಪರ್ಧಿ ನಡೆದಿದ್ದು, ಗೆಲುವು ಸಾಧಿಸಿದ್ದು ಯಾರು ಗೊತ್ತಾ..?
ಇಂಡಿ: ಶನಿವಾರ ನಡೆದ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ರಾವೂರ ಅವರಿಗೆ ೧೮ ಮತಗಳು ಲಭಿಸಿದ್ದು, ಪ್ರತಿಸ್ಪರ್ಧಿ ಅಭ್ಯರ್ಥಿ ಎಸ್.ಡಿ. ಪಾಟೀಲ ಅವರಿಗೆ ೧೫ ಮತಗಳು ಲಭಿಸಿದ್ದರಿಂದ ೩ ಮತಗಳ ಅಂತರದಿAದ ಬಸವರಾಜ ರಾವೂರ ಅಧ್ಯಕ್ಷರಾಗಿ ಆಯ್ಕೆಯಾದರೆಂದು, ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎಸ್. ಪ್ಯಾಟಿ ಅವರಿಗೆ ೧೭ ಮತಗಳು ಲಭೀಸಿದ್ದು, ಪ್ರತಿಸ್ಪರ್ಧಿ ವಿಜಯಕುಮಾರ ನಾಯಿಕ್ ಅವರಿಗೆ ೧೬ ಮತಗಳು ಲಭಿಸಿವೆ ಹೀಗಾಗಿ ಒಂದು ಮತಗಳ ಅಂತರದಿಂದ ಎಸ್.ಎಸ್. ಪ್ಯಾಟಿ ಆಯ್ಕೆಯಾದರೆಂದು ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮೇತ್ರಿ ಅವರಿಗೆ ೧೭ ಮತಗಳು ಲಭಿಸಿದ್ದು, ವಿಜಯಕುಮಾರ ಪೋಳ ಅವರಿಗೆ ೧೬ ಮತಗಳು ಲಭಿಸಿವೆ ಹೀಗಾಗಿ ೧ ಮತದ ಅಂತರದಿAದ ಬಸವರಾಜ ಮೇತ್ರಿ ಆಯ್ಕೆಯಾದರೆಂದು ಚುನಾವಣಾ ಅಧಿಕಾರಿ ಅಂಬಣ್ಣ ಸುಣಗಾರ ಘೋಷಿಸಿದರು.
ವಿಜಯೋತ್ಸವ:
ಬಸವರಾಜ ರಾವೂರ ಅವರ ಬಣದ ಕಾರ್ಯಕರ್ತರು ರಾವೂರ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕುಣ ದು ಕುಪ್ಪಳಿಸಿ, ಸಿಹಿಹಂಚಿ ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ನೌಕರರ ಸಂಘದ ಎದುರಿನ ರಸ್ತೆಯಲ್ಲೆಲ್ಲ ಗುಲಾಲು ರಾರಾಜಿಸಿತು.
ಈ ಸಂದರ್ಭದಲ್ಲಿ ಎಸ್.ವಿ.ಹರಳಯ್ಯ, ನಿಜಣ್ಣ ಕಾಳೆ, ಸುಧಾಕರಗೌಡ ಬಿರಾದಾರ, ಪಿ.ಜಿ. ಕಲ್ಮನಿ, ಶಿವಶರಣ ಹಂಜಗಿ, ಡಾ. ಕಾಂತು ಇಂಡಿ, ಜಿ.ಎಂ. ಬಿರಾದಾರ, ತುಕಾರಾಮ ಹೊಸಮನಿ, ಗಡ್ಡೆಪ್ಪ ಅವಜಿ, ಪ್ರಕಾಶ ಚವಡಿಹಾಳ, ಹೆಚ್.ಹೆಚ್. ಗುನ್ನಾಪೂರ, ಯಲ್ಲಪ್ಪ ಪೂಜಾರಿ, ಎಂ.ಆರ್. ರಾಠೋಡ, ಎಸ್.ಎಸ್. ಪೂಜಾರಿ, ರವಿ ಗಿಣ ್ಣ, ಕೆ.ಎಂ. ಅತ್ತಾರ, ಮಹೇಶ ಮಡಿವಾಳ, ಸಂತೋಶ ಪಾಟೀಲ, ಜೈನು ಹೊಸೂರ, ಅಲ್ತಾಫ್ ಬೋರಾಮಣ ಮತ್ತಿತರರು ಇದ್ದರು.
ಇಂಡಿ: ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.