ಇಂಡಿ : ತಾಲೂಕಿನ ಇಂಗಳಗಿ ಗ್ರಾಮದ ಹತ್ತಿರ
ಗೋಮಾತೆಯ ಗೋಶಾಲೆ ಕಟ್ಟಡ ಕಟ್ಟಲು
ಆಮ್‌ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿ ಡಾ. ಗೋಪಾಲ
ಪಾಟೀಲ ಅವರು ೧ ಲಕ್ಷ ರೂಪಾಯಿ ವೈಯಕ್ತಿಕ
ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಗೋಪಾಲ ಪಾಟೀಲ, ಗೋವಿಗೆ ಭಾರತ ದೇಶದಲ್ಲಿ ಮಾತೃವಿಗೆ
ಹೋಲಿಸಲಾಗಿದೆ. ತಾಯಿಯ ಎದೆಯಲ್ಲಿ ಹಾಲಿಲ್ಲದಿದ್ದಾಗ ಗೋವಿನ ಹಾಲುಣಿಸಿ ಮಕ್ಕಳನ್ನು ಜೋಪಾನ ಮಾಡಲಾಗುತ್ತದೆ. ಹೀಗಾಗಿ ಅಂತಹ ತಾಯಿ ಗೋವಿಗೆ ಕೈಲಾದಷ್ಟು ಸಹಾಯ ಮಾಡಿ ಪ್ರತಿಯೊಬ್ಬರೂ
ಗೋಮಾತೆಯ ಕಿಂಚಿತ್ತಾದರೂ ಋಣ ತೀರಿಸುವ
ಕಾರ್ಯ ಮಾಡೋಣ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯುನ್ನತ ಸ್ಥಾನವಿದೆ. ಈ ಗ್ರಾಮದಲ್ಲಿ ಗೋಶಾಲೆ ಪ್ರಾರಂಭ ಮಾಡಲಾಗುತ್ತಿದೆ ಎಂದು ಗಮನಕ್ಕೆ ಬಂದ ಮೇಲೆ ನಾನು ವೈಯಕ್ತಿಕವಾಗಿ
ಗೋವುಗಳ ಮೇವು ತರಲು ಅಥವಾ ಗೋವುಗಳಿಗೆ ಆಸರೆ ಮಾಡುವುದಾದರೆ ಕಟ್ಟಡ ಕಟ್ಟಲು ೧ ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿ ಸ್ಥಳದಲ್ಲೇ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಗೋಶಾಲೆ ಕಟ್ಟಡಕ್ಕೆ ಭೂಮಿ
ಪೂಜೆ ನೆರವೇರಿಸಲಾಯಿತು. ಶಿವಣಗಿ ಮಹಾರಾಜರು ಮತ್ತು ರಾಮ್‌ರಾವ್ ಕುಲಕರ್ಣಿ ಸಾನಿಧ್ಯವಹಿಸಿದ್ದರು.
ಭೀಮಣ್ಣ ಅಚ್ಚೀಗಾರ, ಡಾ. ಜಗದೀಶ ಪಾಟೀಲ,
ಮಲ್ಲಿಕಾರ್ಜುನ ಹೊನ್ನಾಕಟ್ಟಿ, ವಿಠ್ಠಲ ಹಿಟ್ನಳ್ಳಿ, ಲಾಲಸಾಬ
ಮುಲ್ಲಾ, ರವಿಕುಮಾರ ಹೊನ್ನಳ್ಳಿ, ಸರೇಶ ಪಾಟೀಲ,
ಹುಚ್ಚಪ್ಪ ನಾಟೀಕಾರ, ಮುತ್ತು ಪಾಟೀಲ, ಪ್ರಕಾಶ ಪಾಟೀಲ, ಬಸವರಾಜ ಕಟ್ಟೀಮನಿ, ಲಕ್ಷ್ಮಣ ಕಡಕಟ್ಟಿ,
ಬೀರೇಶ ಪೂಜಾರಿ, ಸಿದ್ದು ಕುಂಬಾರ, ಶಿವಾಜಿ ಜಾಧವ,
ಜ್ಞಾನೇಶ್ವರ ಜಾಧವ ಮತ್ತಿತರು ಇದ್ದರು.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಹತ್ತಿರ
ಗೋಮಾತೆಯ ಗೋಶಾಲೆ ಕಟ್ಟಡ ಕಟ್ಟಲು
ಆಮ್‌ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿ ಡಾ. ಗೋಪಾಲ ಪಾಟೀಲ ಅವರು ೧ ಲಕ್ಷ ರೂಪಾಯಿ ವೈಯಕ್ತಿಕ ಸಹಾಯಧನ ನೀಡಿದರು.