ಅಂತೋನಿಯಾರ್ ಕೋವಿಲ್ ಗ್ರಾಮದಲ್ಲಿ ಗುಡ್ ಫ್ರೈಡೆ ಆಚರಣೆ
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಅಂತೋನಿಯಾರ್ ಕೋವಿಲ್ ಸಂತ ವನದ ಅಂತೋಣಿಯವರ ದೇವಾಲಯದಲ್ಲಿ ಗುಡ್ ಫ್ರೈಡೆ ಆಚರಿಸಲಾಯಿತು.
ಬೆಳಿಗ್ಗೆ ಶಿಲುಬೆ ಹಾದಿ ಗುರುಗಳು ಹಾಗೂ ಕ್ರೈಸ್ತ ಭಕ್ತರಿಂದ ಮಾಡಲಾಯಿತು.ಈ ದಿನದಂದು ಎಲ್ಲರೂ ಕಡ್ಡಾಯವಾಗಿ ಉಪವಾಸ ಇರುತ್ತಾರೆ. ಕ್ರಿಶ್ಚಿಯನ್ ಬಾಂಧವರಿಗೆ ಇದೊಂದು ಶೋಕದಾಯಕ ದಿನವಾಗಿದೆ.ಯೇಸು ಅನುಭವಿಸಿದ ನೋವು ಹಾಗೂ ಮರಣದ ಯಾತನೆಯ ಮೇಲೆ ಗುಡ್ ಫ್ರೈಡೆ ಆಧರಿತವಾಗಿದ್ದು, ಈ ದಿನವನ್ನು ದುಃಖಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಕ್ರಿಶ್ಚಿಯನ್ ಜನರಲ್ಲಿ ಗುಡ್ ಪ್ರೈಡೇಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ಯೇಸು ಕ್ರಿಸ್ತನು ಪಾಪಿಗಳ ಉಪಶಮನಕ್ಕಾಗಿ ಶಿಲುಬೆಯ ಮೇಲೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾನೆ ಎನ್ನುವ ನಂಬಿಕೆಯಿದೆ. ಹೀಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಯೇಸುವನ್ನು ಸ್ಮರಿಸಲಾಗುತ್ತದೆ.
ಕ್ರಿಶ್ಚಿಯನ್ ಸಮುದಾಯದವರಿಗೆ ಮಹತ್ವದ ದಿನಗಳಲ್ಲಿ ಒಂದು. ಆದರೆ ಈ ದಿನವು ಸಂತೋಷ ದಿನವಲ್ಲ, ಬದಲಾಗಿ ದುಃಖದಾಯಕ ದಿನವಾಗಿದೆ. ಯೇಸುವನ್ನು ಶಿಲುಬೆಗೇರಿಸಿದ ದಿನವಾಗಿರುವುದರಿಂದ ಕಪ್ಪು ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ಗುಡ್ ಫ್ರೆಡೆಯನ್ನು ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಗ್ರೇಟ್ ಫೈಡೆ ಎನ್ನಲಾಗುತ್ತದೆ.
ಏಸುಕ್ರಿಸ್ತನ ಶಿಲುಬೆ ಹಾದಿಯನ್ನು ನಾಟಕದ ಮೂಲಕ ಊರಿನ ಸುತ್ತಮುತ್ತ ಮೆರವಣಿಗೆ ಮೂಲಕ ಮಾಡಲಾಯಿತು. ಈ ಸಂದರ್ಭದಲ್ಲಿ ಧರ್ಮಕೇಂದ್ರದ ಗುರುಗಳಾದ ಫಾದರ್ ಜಾನ್ ಪಾಲ್ ಮತ್ತು ನೂರಾರು ಜನರು ಉಪಸ್ಥಿತರಿದ್ದರು.