ಇಂಡಿ: ಯೂನಿಯನ್ ಕೃಷಿ ಕಾಮಧೇನು ಗೋಲ್ಡ್ ಲೋನನ್ನು ಗ್ರಾಹಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಇಂಡಿ ಬ್ರಾಂಚ್ ಮ್ಯಾನೇಜರ್ ಜಹೀರ್ ಪಾಶಾ ಹೇಳಿದರು. ಇಂಡಿಯಲ್ಲಿ ಮಾತನಾಡಿ ಅವರು, ನಮ್ಮ ಬ್ಯಾಂಕ್‌ನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಯೋಜನೆಗಳಿವೆ. ಆದ್ರೇ, ಎಲ್ಲವನ್ನು ಸ್ಥಳೀಯರು ಉಪಯೋಗ ಮಾಡಿಕೊಳ್ಳಬೇಕು. ಅಲ್ಲದೇ, ತಿಂಗಳಿಗೆ 60 ಪೈಸೆ ದರದಲ್ಲಿ ಚಿನ್ನದ ಸಾಲ, ಪ್ರತಿ ಗ್ರಾಂಗೆ ಹೆಚ್ಚಿನ ಮೊತ್ತದ ಸಾಲ, ಸರಳ ದಾಖಲಾತಿಗಳು, ಮರು ಪಾವತಿ ಅವಧಿ 12 ತಿಂಗಳು, ಸಂಸ್ಕರಣಾ ಶುಲ್ಕ ಕೇವಲ 1 ನೂರು ರೂಪಾಯಿ ಮಾತ್ರ ಇರುತ್ತೆದೆ. ಡಿಕ್ಲರೇಷನ್ ಬೆಸಮೆಂಟ ಮೇಲೆ ಪಹಣಿ ಇಲ್ಲದೇ ಚಿನ್ನದ ಮೇಲೆ ಗರಿಷ್ಟವಾಗಿ 5 ಲಕ್ಷ ರೂಪಾಯಿ ವರೆಗೂ ಸಾಲ ಕೊಡುತ್ತೆವೆ. ಅತೀ ಸ್ವಲ್ಪ ಸಮಯದಲ್ಲಿ ತುರ್ತು ಸಾಲ ಕೊಡುವ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಲು ಉತ್ತಮ ಅವಕಾಶ ಎಂದರು.