ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು
ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯ
ಬಿಬಿಆರ್ ಐಟಿಐ ಕಾಲೇಜ, ಮುದ್ದೇಬಿಹಾಳ
ಐಟಿಐಗಳ ಅಂಕಪಟ್ಟಿ ಹಾಗೂ ಎನ್‌ಟಿಸಿ ಪ್ರಮಾಣಪತ್ರ ವಿತರಣೆ ಸಮಾರಂಭ ಕಾರ್ಯಕ್ರಮ
ಮುದ್ದೇಬಿಹಾಳ: ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು
ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯವೆಂದು ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ್ಷರು ಹಾಗೂ ಸ್ಥಳೀಯ ಬಿಬಿಆರ್ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ನೆರಬೆಂಚಿ ರವರು ಹೇಳಿದರು.
ಪಟ್ಟಣದ ನಾಲತವಾಡ ರಸ್ತೆ ಮೈಹಿಬೂಬ ನಗರದಲ್ಲಿ ಬರುವ ಬಿಬಿಆರ್ ಐಟಿಐ ಕಾಲೇಜಿನ ೨೦೨೩ನೇ ಸಾಲಿನ ತರಬೇತಿದಾರರಿಗೆ ಹಮ್ಮಿಕೊಂಡ ಐಟಿಐಗಳ ಅಂಕಪಟ್ಟಿ ಹಾಗೂ ಎನ್‌ಟಿಸಿ ಪ್ರಮಾಣ ಪತ್ರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯನಾದವನಿಗೆ ಆಶೆ, ಆಕಾಂಕ್ಷೆಗಳು ಇರಬೇಕು. ಆದರೆ ದಿಢೀರನೆ ಶ್ರೀಮಂತನಾಗುವ ದುರಾಶೆಗೆ ಬೀಳಬಾರದು.ದುರಾಶೆಗೆ ಬಿದ್ದವರು ವಾಮಮಾರ್ಗ ಹಿಡಿದು ಜೀವನವನ್ನೇ ಹಾಳು ಮಾಡಿಕೊಂಡಿರುವವರ ಕತೆಗಳನ್ನು ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ. ಹಾಗಾಗಿ ಪ್ರಮಾಣಿಕವಾಗಿ ವೃತ್ತಿ ಜೀವನ ನಡೆಸಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಅಂಜುಮನ್ ಐಟಿಐ ಪ್ರಾಚಾರ್ಯ ಎಂ.ಎಸ್ ಕಡುರವರು ಮಾತನಾಡುತ್ತ ಐಟಿಐ ತರಬೇತಿದಾರರು ಅಪ್ರೇಂಟಿಸ್ ತರಬೇತಿ ಪಡೆದರೆ ಐಟಿಐ ಪೂರ್ಣಗೊಳಿಸಿದಂತೆ ಆಗುತ್ತದೆ. ಜತೆಗೆ ಪ್ರತಿ ತಿಂಗಳು ೧೦-೧೫ಸಾವಿರ ರೂಪಾಯಿ ಸ್ಟೆöÊಫಂಡ್ ಸಿಗುತ್ತದೆ. ಅಪ್ರೇಂಟಿಸ್ ಪಾಸಾದವರಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಎಂಎನ್‌ಸಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಗಳಿವೆ. ಹಾಗಾಗಿ ಎಲ್ಲರೂ ಅಪ್ರೇಂಟಿಸ್ ತರಬೇತಿ ಪಡೆಯಬೇಕೆಂದು ಕರೆ ನೀಡಿದರು. ಎಂಜಿವಿಸಿ ಪದವಿ ಕಾಲೇಜಿನ ಪ್ರೋ. ಪ್ರಕಾಶ ನರಗುಂದ ರವರು ಮಾತನಾಡುತ್ತ ಪದವಿಗಳ ಶಿಕ್ಷಣ ಪಡೆದರೂ ಇಂದು ಉದ್ಯೋಗದ ಗ್ಯಾರಂಟಿಯಿಲ್ಲ. ಆದರೆ ಐಟಿಐಗಳ ಶಿಕ್ಷಣದಲ್ಲಿ ಉದ್ಯೋಗದ ಗ್ಯಾರಂಟಿ ಇದೆ. ಆದರೆ ಇಂಥ ಗ್ಯಾರಂಟಿ ಶಿಕ್ಷಣ ಪಡೆದ ತರಬೇತಿದಾರರನ್ನು, ಸಿಬ್ಬಂದಿಗಳನ್ನು ಸರ್ಕಾರ ಅಲಕ್ಷ ಮಾಡಿರುವದು ಬೇಸರ ಸಂಗತಿ ಯೆಂದು ಹೇಳಿದರು.
ಸಮಾರಂಭವನ್ನು ಐಟಿಐ ಅಧ್ಯಕ್ಷರಾದ ಶ್ರೀಮತಿ ಎ.ಆರ್. ಹೊಸಮನಿ ರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಪಿಎಂಸಿಯಲ್ಲಿನ ವ್ಯಾಪಾರಿಗಳಾದ ಹೆಚ್.ಬಿ.ಕೊಂಗನೂರು, ಎಂ.ಎಸ್. ಕಡು, ಪ್ರೋ.ಡಾ.ಪ್ರಕಾಶ ನರಗುಂದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಲ್ಲ ಗಣ್ಯಮಾನ್ಯರು ಸೇರಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಐಟಿಐ ಅಂಕಪಟ್ಟಿ ಹಾಗೂ ನ್ಯಾಶನಲ್ ಟ್ರೇಡ್ ಸರ್ಟಿಫಿಕೇಟ್ (ಎನ್‌ಟಿಸಿ) ಪ್ರಧಾನ ಮಾಡಿದರು. ಸಮಾರಂಭದಲ್ಲಿ ತೇರ್ಗಡೆಯಾದ ಹಾಗೂ ಪ್ರಸಕ್ತ ಸಾಲಿನ ಐಟಿಐ ತರಬೇತಿದಾರರು ಭಾಗವಹಿಸಿದ್ದರು. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಹಾರ್ವರ್ಡ್ ಪಿಯು ಕಾಲೇಜಿನ ಉಪನ್ಯಾಸರಾದ ಶಿವಪ್ರಸಾದ ಸೂಳಿಬಾವಿ ರವರು ನಿರೂಪಿಸಿ ವಂದಿಸಿದರು.