ತ್ರೀವಿಧ ದಾಸೋಹದಿಂದ ಗೋಳಸಾರ ಮಠ ಮಾದರಿ
ಇಂಡಿ : ಸರಕಾರಕ್ಕೆ ಮಾಡಲಾಗದ ಸಮಾಜಮುಖಿ ಕಾರ್ಯಗಳನ್ನು ನಾಡಿನ ಮಠ ಮಾನ್ಯಗಳು ಮಾಡುತ್ತಿವೆ. ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲೀಗೈಕ್ಯರಾಗಿ ೩೦ ವರ್ಷ ಕಳೆದರೂ ಅವರು ಇಂದು ಭಕ್ತರ ಮನೆ ಮನದಲ್ಲಿ ಬೆಳಕಾಗಿದ್ದಾರೆ. ಎಲ್ಲರನ್ನು ಪ್ರೀತಿಸಿ ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರದ ಮಠವಾಗಿದೆ. ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಇತಿಹಾಸ ಮೂಡಿಸುತ್ತಿರುವ ಅಭಿನವ ಪುಂಡಲಿAಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯ ಎಂದು ಕಲಬುರಗಿಯ ದೂರದರ್ಶನ ಮತ್ತು ಆಕಾಶವಾಣ ಕಲಾವಿಧ ಮಲ್ಲಿಕಾರ್ಜುನ ಶಾಸ್ತಿçÃಗಳು ಹೇಳಿದರು.
ಮಂಗಳವಾರ ಸಂಜೆ ತಾಲೂಕಿನ ಗೋಳಸಾರದ ಶ್ರೀ ಪುಂಡಲಿAಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಸದ್ಗುರು ತ್ರೀಧರೇಶ್ವರ ಮಹಾಶಿವಯೋಗಿಗಳ ೩೧ ನೇ ಪುಣ್ಯಾರಾಧನೆ ಮಹೋತ್ಸವದ ಎರಡನೆಯ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿಬಡವರಿಗೆ ಆಶ್ರಯ ನೀಡಿ ಬಡಮಕ್ಕಳಿಗೆ ಶಿಕ್ಷಣ ನೀಡುತ್ತ ಅನ್ನ ದಾಶೋಹ ನೀಡುತ್ತಿರುವ ಗೋಳಸಾರ ಮಠದ ಕಾರ್ಯ ಇತರರಿಗೆ ಮಾದರಿ ಎಂದರು.
ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಮಾತನಾಡಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವ ಜಾತ್ರೆ ಮತ್ತು ದೇವತಾ ಕಾರ್ಯಗಳಿಗೆ ಸಾರ್ವಜನಿಕರು ಪ್ರತಿನಿತ್ಯ ಭಾಗವಹಿಸುವದರಿಂದ ಸಂತೋಷ ನೆಮ್ಮದಿ ಸಿಗಲು ಸಾದ್ಯ ಎಂದರು.
ಆಲಮೇಲದ ಅರ್ಬನ ಬ್ಯಾಂಕಿನ ಅಧ್ಯಕ್ಷ ಶಿವಕುಮಾರ ಗುಂದಗಿ ದೇಗುಲಗಳು ಭಕ್ತರಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದರು. ಒತ್ತಡದ ಕೆಲಸದಿಂದ ಅನೇಕರಿಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ದೇವಸ್ಥಾನಗಳು ಭಕ್ತಿಯ ಶೃದ್ದಾ ಕೇಂದ್ರಗಳು ಎಂದರು.
ಶಿಕ್ಷಕ ರವಿ ಆಳೂರ, ಶಿಕ್ಷಕ ಎ.ಎಸ್.ಪಾಸೋಡಿ ಮಾತನಾಡಿದರು.
ವೇದಿಕೆಯ ಮೇಲೆ ಗೋಳಸಾರದ ಅಭಿನವ ಪುಂಡಲಿAಗ ಶ್ರೀಗಳು, ರೋಡಗಿಯ ಅಭಿನವ ಶಿವಲಿಂಗ , ಜೈನಾಪುರದ ರೇಣುಕಾ ಶಿವಾಚಾರ್ಯರರು ನಿತ್ಯಾನಂದ ಶ್ರೀಗಳು ಆರೂಢ ಮಠ ರಾಂಪೂರ ಮತ್ತಿತರಿದ್ದರು.
ಇಂಡಿ ತಾಲೂಕಿನ ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಲ್ಲಿಕಾರ್ಜುನ ಶಾಸ್ತಿçÃಗಳು ಮಾತನಾಡಿದರು.



















