ಇಂಡಿಯಲ್ಲಿ ಸಂಭ್ರಮದ ದೇವಿ ಮೆರವಣೆಗೆ
ಇಂಡಿ : ಪಟ್ಟಣದ ಶ್ರೀ ಅಂಬಾಭವಾನಿ ನವ ತರುಣ ಮಂಡಳಿ ಚವಡಿ ಓಣ , ಶ್ರೀ ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿಭೀರಪ್ಪ ನಗರ, ಶ್ರೀ ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣ ಮತ್ತು ಶ್ರೀ ಅಂಬಾಭವಾನಿ ನವ ತರುಣ ಮಂಡಳಿ ಹೂಗಾರ ಇವರಿಂದ ಸಂಭ್ರಮದ ದೇವಿಯ ಮೆರವಣೆಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಕುಂಬಾರ ಓಣ ಯ ದೇವಿಯ ಮೆರವಣೆಗೆಗೆ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಚಾಲನೆ ನೀಡಿದರು.
ಡೊಳ್ಳು ಕುಣ ತ, ಕೋಲಾಟ, ಲೇಜಿಮ್, ಭಜನೆ,ಗೊಂದಳಿ ಭಜನೆ, ಮೆರವಣೆಗೆಯ ಆಕರ್ಷಣೆಯಾಗಿತ್ತು. ಎಲ್ಲೆಡೆ ಅಂಬಾಭವಾನಿ ಉಧೋ ಉಧೋ ಇಂಡಿಯ ತಾಯಿಗೆ ಉಧೋ ಉಧೋ ಜಯಘೋಷ ಮೊಳಗಿದವು.
ಭಕ್ತರು ಕೇಸರಿ ಟೋಪಿ ಧರಿಸಿ ಕೊರಳಲ್ಲಿ ಕೇಸರಿ ಶಲ್ಯ ಹಾಕಿಕೊಂಡಿದ್ದರು.
ಮೆರವಣೆಗೆ ಉದ್ದಕ್ಕೂ ಭಕ್ತರು ತಮ್ಮ ಮನೆಯ ಮುಂದೆ ದೇವಿಯ ಮೆರವಣೆಗೆ ಬಂದಾಗ ನೀರು ಹಾಕಿ ಪೂಜೆ ಸಲ್ಲಿಸುವದು ಸಾಮಾನ್ಯವಾಗಿತ್ತು. ಮೆರವಣೆಗೆಯಲ್ಲಿ ಯುವಪಡೆ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಆಕರ್ಷಣೆಯಾಗಿತ್ತು.
ಇಂಡಿ ಕುಂಬಾರ ಓಣಿಯ ಮೆರವಣೆಗೆಗೆ ಶಾಸಕ ಯಶವಂತರಾಯಗೌಡ ಪಾಟೀಲರು ಚಾಲನೆ ನೀಡಿದರು.