ಅಫಜಲ್ಪುರ : ತಾಲೂಕಿನ ಹೊಸೂರ ಗ್ರಾಮದಲ್ಲಿ ನಂದಿ ಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಇಂದು ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ,ಪಂಚಾಮೃತ ಅಭಿಷೇಕ ಹುವಿನ ಅಲಂಕಾರ ಮಹಾಪೂಜೆ ಮಂಗಳಾರತಿ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಜಾತ್ರೆಯ ಅಂಗವಾಗಿ ಮೇ 3 ರಂದು ಸಾಯಂಕಾಲ 5 ಗಂಟೆಗೆ ನಂದಿಕೋಲ ಮೆರವಣಿಗೆ ಮತ್ತು ಬಸವೇಶ್ವರ ಪೋಟೋ ಮೆರವಣಿಗೆ ಪ್ರಮುಖ ರಸ್ತೆಗಳ್ಳಿ ಕುಂಭ ಕಳಸ ವಾಧ್ಯ ವೃಂದಗಳಿಂದ ಸಂಗೀತ ಭಜನೆ ಯೊಂದಿಗೆ ದೇವಸ್ಥಾನಕ್ಕೆ ತಲುಪಿತು. ನಂತರ ರಾತ್ರಿ 10 ಗಂಟೆಗೆ ಪಾರಿಜಾತ ಭಜನೆ, ಸಂಗೀತ ಭಜನೆ ಜರುಗಿತು. ದಿ: 4 ರಂದು 10:30 ಗಂಟೆಗೆ ಸಾಮಾಜಿಕ ನಾಟಕ ಪ್ರಾಣ ಹೋದರು ಮಾನ ಬೇಕು ನಾಟಕ ಜರುಗಲಿದೆ.
ದಿ: 5 ರಂದು ಜಂಗಿ ಪೈಲ್ವಾನರಿಂದ ಕುಸ್ತಿ ಜರುಗಲಿವೆ ಎಂದು ಬಸವೇಶ್ವರ ಕಮೀಟಿಯವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾತಲಿಂಗಯ್ಯ ನಂದಿಮಠ,ಅಶೋಕ ತಂಬಾಕೆ ಶಿಕ್ಷಕರು,ಸಿದ್ದಾರಾಮ ಗೌಡಗಾಂವ, ಮಲ್ಲಣ್ಣಾ ಬರಗಾಲೆ, ಗುರಣ್ಣಾ ಅಂದೇವಾಡಿ, ನಿಂಗಪ್ಪ ವಿಭೂತೆ, ಸಿದ್ದಾರಾಮ ಬ್ಯಾಗಳ್ಳಿ,ಬಸವರಾಜ ಚಿನಮಳ್ಳಿ,ನಿಂಗರಾಜ ಗೌಡಗಾಂವ, ಶಿವಾನಂದ ಬಳಗಾನೂರ, ಸಾತಲಿಂಗಪ್ಪ ಹಂಜಗಿ, ಮಹೇಶ ಚಿನಮಳ್ಳಿ, ವಿಜಯಕುಮಾರ ದುರ್ಗ ಸೇರಿದಂತೆ ಗ್ರಾಮಸ್ಥರಿದ್ದರು.
ವರದಿ: ಉಮೇಶ್ ಅಚಲೇರಿ
Voice Of Janata Kalburagi