ಇಂಡಿ: ತಾಲೂಕಿನ ಬೋಳೆಗಾಂವ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡಿ. 21 ರಿಂದ 23 ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.21ರಂದು ಬೆಳೆಗ್ಗೆ 10:00 ಘಂಟೆಗೆ ಸಕಲ ಸದ್ಬಕ್ತರಿಂದ ಸಕಲ ವಾದ್ಯ ವೈಭವಗಳೋಂದಿಗೆ ದೇವಸ್ಥಾನ
ಕಳಸಾರೋಹಣ ಹಾಗೂ ಸಪ್ತಾಹದೊಂದಿಗೆ ಮಣೆ ಏರುವುದು ನಿರಂತರ ಭಜನೆ ಕಾರ್ಯಕ್ರಮ ಜರಗುವುದು. ಡಿ. 21 ರಂದು ಬೆಳೆಗ್ಗೆ 9:30 ಘಂಟೆಗೆ ಓಂ ಸಾಯಿ ಯುವಕ ಮಂಡಳಿಯವರಿಂದ ವಿಜಯಪೂರ
ಜಿಲ್ಲಾ ಅಮೇಚೂರ ಕಬಡ್ಡಿ ಅಶೋಶಿಯೇಶನ್
ಇವರ ಸಂಯುಕ್ತ ಆಶ್ರಯದಲ್ಲಿ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. 22 ರಂದು ರಾತ್ರಿ 10:00 ಘಂಟೆಗೆ ಶ್ರೀ ರೇವಣ ಲಕ್ಷ್ಮೇಶ್ವರ ಇವರ ಸಾರಥ್ಯದಲ್ಲಿ ಮಾತೃಭೂಮಿ ಕಲಾ ಲಕ್ಷ್ಮೇಶ್ವರ ಇವರಿಂದ
ಅಭಿನಯಸಲ್ಪಡುವ ಕೌಟುಂಬಿಕ ಹಾಸ್ಯ ಭರಿತ
ಸುಂದರ ಸಾಮಾಜಿಕ ನಾಟಕ “ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ” ಅರ್ಥಾತ್ ಸಹೋದರರ
ಸವಾಲ ನಾಟಕ ಮತ್ತು ಡಿ. 23 ರಂದು ಮಧ್ಯಾಹ್ನ
3:00ಘಂಟೆಗೆ ಜಂಗಿ ನಿಕಾಲಿ ಕುಸ್ತಿ ಜರಗುವವು.
ರಾತ್ರಿ 9:00 ಘಂಟೆಗೆ ಶಂಕರ ಮೇಲೋಡಿಸ್
ಆರ್ಕೇಸ್ಟ್ರಾ ಐನಾಪೂರ ಇವರಿಂದ ಹಾಸ್ಯ
ರಸಮಂಜರಿ ಕಾರ್ಯಕ್ರಮ ಜರಗುವುದು
ಎಂದು ಕಮೀಟಿ ಅಧ್ಯಕ್ಷ ವಿ.ಹೆಚ್. ಬಿರಾದಾರ
ಪ್ರಕಟಣೆಗೆ ತಿಳಿಸಿದ್ದಾರೆ.