ಲಿಂಗಸೂಗೂರು: ಪಟ್ಟಣದ ಬಿಜೆಪಿ ಮಹಿಳಾ ಮೋರ್ಚಾದ ಉಸ್ತುವಾರಿ ಹಾಗೂ ಮಂಡಳ ಕಾರ್ಯದರ್ಶಿಯಾದ ಜ್ಯೋತಿ ಸುಂಕದ ಅವರು ಬಡ ಕುಟುಂಬದವರಾಗಿದ್ದು ಇವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಲ್ಲದೆ ಸಾಮಾಜಿಕವಾಗಿಯೂ ಕೂಡ ತಮ್ಮ ಹೆಸರನ್ನು ಗುರುತಿಸಿಕೊಂಡಿದ್ದಾರೆ.
ಕರೋನಾ ಸಂಧರ್ಭದಲ್ಲಿ ಅನೇಕ ಸಾಮಾಜಮುಖಿ ಕೆಲಸವನ್ನು ಮಾಡಿ ರಾಜಕೀಯ ಹಾಗೂ ಸಾಜಿಕವಾಗಿ ಬೇಶ್ ಅನಿಸಿಕೊಂಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಅನೇಕ ಬಡ ಕುಟುಂಬಗಳು ಸಂಕಷ್ಟದಲ್ಲಿ ಇದ್ದಾಗ ಅಂತಹ ಕುಟುಂಬಗಳನ್ನು ಗುರುತಿಸಿ ಸಾಹಾಯ ಹಸ್ತ ನೀಡಿದ್ದಾರೆ. ಕರೊನಾದಂತಹ ಕಠಿಣ ಪರಿಸ್ಥಿತಿ ಯಲ್ಲಿ ತಮ್ಮ ಸ್ವಂತ ಹಣ ದಿಂದ ಸಂಕಷ್ಟದ್ದವರಿಗೆ ಊಟ ಆಹಾರ ಸಾಮಾಗ್ರಿ ಮಾಸ್ಕ್ ಸ್ಯಾನಿಟಜರ್ ನೀಡುವ ಮೂಲಕ ನೊಂದವರ ಪಾಲಿನ ಆಶಾ ಕಿರಣವಾಗಿ ಹೊರ ಹಮ್ಮಿದ್ದರು. ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದನ್ನು ಗುರುತಿಸಿ united nation international peace council ಆವರು GLOBAL BEST SOCIAL WORKER AWARD ಅನ್ನು ತಮಿಳುನಾಡಿನ ಊಟಿಯಲ್ಲಿ ನೀಡಿ ಗೌರವಿಸಿದ್ದಾರೆ.