ಕೂಡಲೇ ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಿ : ಜನ ಜಾನವಾರು ಬದುಕಿಸಿ ಕೆಂಗನಾಳ
ಇಂಡಿ : ಸತತವಾಗಿ ಬರಗಾಲ ನಿಮಿತ್ಯ ಇಂಡಿ, ಸಿಂದಗಿ ತಾಲೂಕಿನ ರೈತರ ಬದಕು ಬರಗೆಟ್ಟಿದೆ, ಕುಡಿಯಲು ನೀರಿಲ್ಲ ಹಾಗೂ ಕೃಷಿಗೂ ನೀರಿಲ್ಲದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನ – ಜಾನುವಾರು ಕುಡಿಯಲು ಕೂಡಲೇ ಈ ಭಾಗದ ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಬೇಕು, ಇಲ್ಲದಿದ್ದರೆ ಈ ಭಾಗದ ರೈತರೊಂದಿಗೆ KBJNL ರಾಂಪುರ ಕಚೇರಿಗೆ ಮುತ್ತಿಗೆ ಹಾಕಬೇಕಾದಿತು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆ ಮೂಲಕ ಸಂಭಂದ ಪಟ್ಟವರಿಗೆ ಎಚ್ಚರಿಕೆ ನೀಡಿದ್ದಾರೆ.