ಇಂಡಿ : ಪಾರದರ್ಶಕ ಆಡಳಿತ ನೀಡುವುದರ ಜೊತೆಗೆ ಸರ್ವ ಧರ್ಮಿಯರಿಯನ್ನ ಸಮಾನ ಅವಕಾಶ ಕಲ್ಪಿಸಿಕೊಟ್ಟು ಸಮಾಜಮುಖಿಯಾಗಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಡಿ ಮತ ಕ್ಷೇತ್ರದ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಎಂದು ಕಾಂಗ್ರಸ್ ಯುವ ಮುಖಂಡ ಹಾಗೂ ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷ ಹಸನ ಮುಜಾವರ ಆಗ್ರಹಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ರೈತಪರ, ಮಹಿಳಾಪರ, ದಲಿತಪರ, ಕಾರ್ಮಿಕಪರ ಕೆಲಸ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಿಕ್ಕಂತ ಅವಧಿಯಲ್ಲಿ ಶಾಶ್ವತ ಕಾಮಗಾರಿ ಮಾಡಿದ್ದು, ಹಿಂದೂ ಮುಸ್ಲಿಂ ಭಾವೈಕ್ಯತೆ ಬೆಸೆಯುವದರ ಜೊತೆಗೆ ಧರ್ಮ ನಿರಾಪೇಕ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜಯ ಪ್ರಕಾಶ್ ನಾರಾಯಣ, ರಾಮಮನೋಹರ್ ಲೋಹಿಯಾ, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ, ಕನಕದಾಸ ಮುಂತಾದ ದಾರ್ಶನಿಕರ ಆದರ್ಶ ಅಳವಡಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದಾರೆ. ಇಂಡಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಅಂತರ್ ಜಲ ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶಿಕ್ಷಣ, ಅರೋಗ್ಯ, ಉದ್ಯೋಗ, ಸಂಸ್ಕøತಿ, ನಿರಾವರಿ, ಸಾರಿಗೆ, ಮುಂತಾದ ಕ್ಷೇತ್ರದಲ್ಲಿ ಗಣನಿಯ ಸಾಧನೆ ಮಾಡಿದ್ದಾರೆ. ಇಂಡಿ ವಿಧಾನಸಭಾ ಮತಕ್ಷೇತ್ರ ಗಡಿ ಪ್ರದೇಶವಾಗಿದ್ದು, ಈ ಕ್ಷೇತ್ರದಿಂದ ಇಲ್ಲಿಯವರೆಗೆ ಯಾರು ಸಚಿವರಾಗಿಲ್ಲ. ಯಶವಂತರಾಗೌಡ ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಶಾಸಕರ ಸೇವೆಯನ್ನು ಗಣನೆಗೆ ತೆಗೆದುಕೊಂಡು ಮತ್ತು ಅವರ ಅನುಭವ ಆಧರಿಸಿ ಮಂತ್ರಿ ಸ್ಥಾನ ಕೊಟ್ಟರೆ, ಖಂಡಿತ ರಾಜ್ಯಕ್ಕೆ ಮಾದರಿ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.