ವಿಜಯಪುರ: ರಂಜಾನ್ ಹಬ್ಬದಲ್ಲಿ ರಾತ್ರಿ ವೇಳೆಯಲ್ಲಿ ಮಾರ್ಕೆಟ್ ಮಾಡಲು ಹೆಚ್ಚಿನ ಸಮಯಾವಕಾಶ ನೀಡುವಂತೆ ಅಲ್ಪಸಂಖ್ಯಾತ ಮುಖಂಡರು ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ರಂಜಾನ್ ಹಬ್ಬಕ್ಕೆ ನಾಲ್ಕೈದು ದಿನಗಳು ಬಾಕಿ ಇದೆ. ಅಲ್ಲದೇ, ಕಳೆದ ಬಾರಿಯ ಕೋವಿಡ್ ನಿಂದಾಗಿ ವ್ಯಾಪಾರ ವಹಿವಾಟು ನಷ್ಟ ಆಗಿದೆ. ಅದಕ್ಕಾಗಿ ಈ ಬಾರಿಯ ರಂಜಾನ್ ಹಬ್ಬಕ್ಕೆ ಮಾರ್ಕೆಟಿಂಗ್ ಮಾಡಲು ಹೆಚ್ಚು ಸಮಯ ನೀಡುವಂತೆ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.