ಎಚ್ಡಿಕೆ ನುಡಿದಂತೆ ನಡೆದು ರೈತರ ಸಾಲಮನ್ನಾ ಮಾಡಿದ್ದು ಇತಿಹಾಸ ಬಿ.ಡಿ.ಪಾಟೀಲ..
ಶಿರಶ್ಯಾಡ ಗ್ರಾಮದಲ್ಲಿ ಜೆಡಿಎಸ್ ಸಂಪರ್ಕ ಕಾರ್ಯಾಲಯ ಉದ್ಘಾಟನೆ..
ಇಂಡಿ : ಸಾಮನ್ಯ ಜನರ ನೋವು ಅರಿತವರು. ಹೋರಾಟದಿಂದಲೇ ಸಾರ್ವಜನಿಕ ಬದುಕಿಗೆ ಹೆಜ್ಜೆ ಇಟ್ಟವರು. ಇನ್ನೂ ವಿಶೇಷವಾಗಿ ರೈತರ, ಅಸಂಘಟಿತ ಕಾರ್ಮಿಕ, ಮಹಿಳೆಯರ, ಬಡವರ ದಿನ ದಲಿತರ, ಶೋಷಿತರ ಧ್ವನಿಯಾಗಿ ನಿಂತವರು. ಅವರಿಗೆ ಒಂದು ಬಾರಿ ಅವರಿಗೆ ಅವಕಾಶ ನೀಡಿ ಎಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಪರ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹೇಳಿದರು.
ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಪಕ್ಷ ಸೇರ್ಪಡೆ ಹಾಗೂ ಜೆಡಿಎಸ್ ಸಂಪರ್ಕ್ ಕಾರ್ಯಾಲಯ ಉದ್ಘಾಟಸಿ ಮಾತನಾಡಿದ ಅವರು, ಜೆಡಿಎಸ್ ಘೋಷಿತ ಅಭ್ಯರ್ಥಿಗೆ ಒಂದು ಬಾರಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ 2023 ರ ಇಂಡಿ ವಿಧಾನ ಸಭಾಮತಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಬಿ.ಡಿ ಪಾಟೀಲ, ನಮ್ಮ ಕ್ಷೇತ್ರದಲ್ಲಿ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ಅತೀ ಹೆಚ್ಚು ಶ್ರಮಿಸಿದ್ದಾರೆ. ಇಂಡಿ ತಾಲ್ಲೂಕು ಸಮಗ್ರ ನೀರಾವರಿಗಾಗಿ ಪಕ್ಷದ ಕಾರ್ಯಕರ್ತರು ಸುಮಾರು 42 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ರೈಲು ರುಖೋ ಚಳುವಳಿ ಮಾಡಿದ್ದಾರೆ. ಹಲವಾರು ಪ್ರತಿಭಟನೆಗಳು ನಡೆದಿವೆ. ಆದರೆ ಕಣ್ಣು ಕಿವಿ ಇಲ್ಲದ ಸರಕಾರ ಬಹಳ ದಿನಗಳವರೆಗೆ ಮೌನವರಿಸಿದ್ದು, ಕ್ಷೇತ್ರದ ಅಭಿವೃದ್ಧಿ ಮತ್ತು ಸರಕಾರಿ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ತಾಲ್ಲೂಕಿನ ನಡೆದಿವೆ ಎಂಬುವದು ಜನ ಸಾಮಾನ್ಯರ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಇನ್ನೂ ಪಂಚರತ್ನ ಕಾರ್ಯಕ್ರಮ ನಾಡಿನ ಬಡವರ, ನಿರುದ್ಯೋಗಿಗಳ,ಮಹಿಳೆಯರ, ರೈತರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳವ ಕಾರ್ಯಕ್ರಮವಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ನಡೆಯುವ ನಾಯಕರಾಗಿದ್ದು, 2018ರ ಚುನಾವಣೆಯಲ್ಲಿ ನುಡಿದಂತೆ ನಡೆದು ರೈತರ ಸಾಲಮನ್ನಾ ಮಾಡಿದ್ದು ಇತಿಹಾಸ ಎಂದರು. ಈ ಬಾರಿ ನನ್ನಂತಹ ಬಡ ವ್ಯಕ್ತಿಯನ್ನು ಸೇವೆಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಮುಖಂಡ ಮರೆಪ್ಪ ಗಿರಣಿವಡ್ಡರ, ಶ್ರೀ ಶೈಲಗೌಡ ಪಾಟೀಲ, ಮಾಜಿದ ಸೌದಾಗರ ಮಾತನಾಡಿದರು.
ವೇದಿಕೆ ಮೇಲೆ ಸಿದ್ದು ಡಂಗಾ, ಧರ್ಮರಾಜ ಕಲ್ಲೂರ, ಬಸವರಾಜ ಹಂಜಗಿ, ರತ್ನಾಕರ್ ಪರೀಟ,ರಾಜು ಮಾಶ್ಯಾಳ, ಕಾಶಿನಾಥ್ ಭಜಂತ್ರಿ, ಗಂಗಾಧರ ಹಿರೇಮಠ, ಅಪ್ಪಾರಾಯ ಆಲಮೇಲ, ಹಣಮಂತ ಬಸನಾಳ, ಶಂಕರ ತೆಲಗ, ಗುರಣಗೌಡ ಬಗಲಿ,ಮಲ್ಲು ನರಳಿ, ದೇವೇಂದ್ರ ಕುಂಬಾರ, ಅಶೋಕ ತೇಲಗ, ಪ್ರಭು ಮಾಳಿ, ಶ್ರೀಶೈಲ ಬಬಲೇಶ್ವರ,ಚಂದು ಪೂಜಾರಿ ನಿರೂಪಿಸಿದರು.