ಇಂಡಿ : ಸುಕ್ಷೇತ್ರ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ಸತ್ಸಿಷ್ಯರಾದ ಗುರು ಬಸವಲಿಂಗ ಗಿರಿಜಾಮಾತಾಜಿ ೮೪ ನೇ ಪುಣ್ಯಾರಾಧನೆಯ ಜಾತ್ರಾ ಮಹೋತ್ಸವ ಜ.೦೨ ಮತ್ತು ೦೩ ರಂದು ತಾಲ್ಲೂಕಿನ ಹಿರೇರೂಗಿ- ಬೋಳೆಗಾಂವ ಗ್ರಾಮದ ಕಮರಿ ಮಠದಲ್ಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ “ಧರ್ಮ ಧ್ವಜಾರೋಹಣ ” ಜ.೨ ಬೆಳಿಗ್ಗೆ ೯ : ಘಂಟೆಗೆ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು ಗೋಳಸಾರಮಠ ಇವರ ಅಮೃತ ಹಸ್ತದಿಂದ ನಡೆಯುತ್ತದೆ. ತದನಂತರ ಹಿರೇರೂಗಿ- ಬೋಳೆಗಾಂವ ಎಸ್.ಬಿ.ಪ.ಪೂ ಕಾಲೇಜು ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೆ ಹಿರೇರೂಗಿ ಗ್ರಾಮದ ಸದ್ಭಕ್ತರಿಂದ ಸಕಲ ವಾದ್ಯ ವೈಭವಗಳೊಂದಿಗೆ ಗಿರಿಜಾಮಾತಾಜಿ ಗೋಪುರಕ್ಕೆ ಕಳಸಾರೋಹಣ ಹಾಗೂ ಸಪ್ತಾಹ ಕಾರ್ಯಕ್ರಮ ನಡೆಯುವವು.
ಅದೇ ದಿನ ರಾತ್ರಿ ೯ : ಘಂಟೆಗೆ ಹಿರೇರೂಗಿ- ಗೊರನಾಳ, ಅಥರ್ಗಾ ಬೋಳೆಗಾಂವ ಗ್ರಾಮದ ಸಕಲ ಭಕ್ತರಿಂದ ಭಜನೆ ಹಾಗೂ ಕೀರ್ತನೆಗಳು ನಡೆಯುವವು.
ಜ-೩ ಬೆಳಿಗ್ಗೆ ೧೧ ಘಂಟೆಗೆ ಗುರು ಬಸವಲಿಂಗ ಗಿರಿಜಾಮಾತಾಜಿ ಅಕ್ಷಾತಾರೋಪಣ ಕಾರ್ಯಕ್ರಮ ಗೊರನಾಳ ಸದ್ಭಕ್ತರಿಂದ ನಡೆಯುವುದು. ಜೊತೆಗೆ ಅನ್ನಪ್ರಸಾದ ಹಾಗೂ ಜೆಟ್ಟಪ್ಪ ಸಾಲೋಟಗಿ ಹಾಗೂ ಹಣಮಂತ ಗಿಣ್ಣಿ ಹಿರೇರೂಗಿ ಇವರಿಂದ ಡೊಳ್ಳಿನ ಪದಗಳು ಜರಗುತ್ತವೆ. ಸಾಯಂಕಾಲ ೪. ಘಂಟೆಗೆ ಜಂಗಿ ನಿಕಾಲಿ ಕುಸ್ತಿಗಳು , ಲಿಂಗೈಕೆ ಶ್ರೀ ಮ.ನಿ.ಪ.ಸ್ವ ಸಂಗನಬಸವ ಮಹಾಸ್ವಾಮಿಗಳ ಭಾವಚಿತ್ರ ಅಡ್ಡಪಲಕ್ಕಿ ಮಹೋತ್ಸವ ವಾದ್ಯ ವೈಭವಗಳೊಂದಿಗೆ ಜರಗುವುದು ಎಂದು ಜಾತ್ರಾ ವ್ಯವಸ್ಥಾಪಕ ಮಂಡಳಿ ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದರು.