ವಿಜಯಪುರ ಜಿಲ್ಲೆಯಲ್ಲಿ ಗಾಂಜಾ ಆರೋಪಿಗೆ ಶಿಕ್ಷೆ..!
ವಿಜಯಪುರ : ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಗೆ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗುರುವಾರ ಸುಮಾರು 4 ಗಂಟೆಗೆ ತೀರ್ಪು ನೀಡಿದೆ. ವಿಜಯಪುರದ ಸಲೀಂ ಖಾಜಾಸಾಬ ಆಲಮೇಲ (43) ಶಿಕ್ಷೆಗೊಳಗಾದವ. ಈತ ಅಪ್ರಾಪ್ತ ಬಾಲಕನೊಂದಿಗೆ ಸೇರಿಕೊಂಡು ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಜಮಖಂಡಿ ರಸ್ತೆಯಲ್ಲಿರುವ ಗಂಗನಹಳ್ಳಿ ತೋಟದ ಬಳಿ ಸಾಗಣೆ ಮಾಡುತ್ತಿದ್ದಾನೆ ಮಾಹಿತಿ ಆಧರಿಸಿ ಅಂದಿನ ಗಾಂಧಿಚೌಕ್ ಠಾಣೆಯ ಪಿಎಸ್‌ಐ ಆರೀಫ್ ಮುಶಾಪುರಿ ದಾಳಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಶಿವಾಜಿ ನಲವಡೆ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಸರಕಾರದ ಪರವಾಗಿ ಎಸ್.ಎಚ್. ಹಕಿಂ ವಾದ ಮಂಡಿಸಿದ್ದರು.