ಅಂದರ್ ಬಾಹರ್ ಆಟ; ಪೋಲಿಸ್ ಸೇರಿ 15 ಜನರ ವಿರುದ್ಧ ಪ್ರಕರಣ ದಾಖಲು..!
ವಿಜಯಪುರ : ಅಕ್ರಮವಾಗಿ ಅಂದರ್ ಬಾಹರ್ ಆಟವಾಡುತ್ತಿದ್ದಾಗ ಪೊಲೀಸರು ದಾಳಿಗೈದು 15 ಜನರ ವಿರುದ್ಧ ಕೇಸ್ ದಾಖಲು ಮಾಡಿರುವ ವಿಜಯಪುರ ನಗರದ ಕನಕದಾಸ ಬಡಾವಣೆಯ ಅನಮೋಲ್ ಹೋಟೆಲ್‌ನಲ್ಲಿ ನಡೆದಿದೆ. ರಮೇಶ ಮಾಶ್ಯಾಳ, ಅಪ್ಪಾಸಾಹೇಬ್ ಶೆಟಗಾರ್, ನಜೀರ್ ನಾಲಬಂದ್, ಆನಂದ ಬೂದಿಹಾಳ, ಸಾಹೇಬ್‌ಗೌಡ ಪಾಟೀಲ್, ಮೊನಪ್ಪ ಸಗರ, ಮಲ್ಲಿಕಾರ್ಜುನ ಅಂಗಡಿ, ರಾಜಶೇಖರ ಅಂಗಡಿ, ಶಿವಾನಂದ ಕಲಬುರಗಿ, ಯಲಗೂರೇಶ ಕುಲಕರ್ಣಿ, ಮುತ್ತಪ್ಪ ಬಬಲಾದಿ, ವಿಠ್ಠಲ ರೊಳ್ಳಿ, ಶ್ರೀಶೈಲ್ ಕೆಂಪೆಗೌಡ, ಮುತ್ತಪ್ಪ ಜಂಗಮಶೆಟ್ಟಿ, ಚಂದ್ರಶೇಖರ ಪಾಟೀಲ ವಿರುದ್ಧ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೆ, ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 46,320 ನಗದು ನಗದು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರದಲ್ಲಿ ಗುರುವಾರ ಎಸ್ಪಿ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.