ಇಂಡಿ : ಉತ್ತರ ಕರ್ನಾಟಕ ಏನು ಅನ್ನೊದು ತೋರಸ್ತಿನಿ ಬರುವ ದಿನಗಳಲ್ಲಿ ಇತಿಹಾಸ ಮಾಡುವೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ಮಾತಾನಾಡಿದರು.
ಇಂಡಿ ಪಟ್ಟಣದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದ್ಘಾಟಿಸಿ ಮಾತಾನಾಡಿದ ಅವರು, ಬಿಜೆಪಿ ಪಕ್ಷ ಬರಲು ನಾನೇ ಕಾರಣ. ಯಡಿಯೂರಪ್ಪ ಮುಖ್ಯ ಮಂತ್ರಿ ಯಾಗುವಲ್ಲಿ ನನ್ನ ಪಾತ್ರವಿದೆ ಎಂದರು. ಬೆಂಗಳೂರಲ್ಲಿ ಕುಳಿತುಕೊಂಡು ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಜನರ ಸಲುವಾಗಿಯೇ ಕಲ್ಯಾಣ ರಾಜ ಪ್ರಗತಿ ಪಕ್ಷ . ಇದು ಹಿಂದೂ ಮುಸ್ಲಿಂರ ಪಕ್ಷ. ನಮ್ಮ ಪಕ್ಷದ ಪ್ರಣಾಳಿಕೆಯ ಬಹಳ ವಿಶೇಷವಾಗಿದೆ. ಬಸವೇಶ್ವರ ರೈತ ಯೋಜನೆ, ಸರಕಾರದ ವಾಹನದಲ್ಲೆ ಅನ್ನದಾತನ ಮನೆಗೆ ಗೊಬ್ಬರ ವಿತರಣೆ, ಬಡತನದ ರೇಖೆಗಿಂತ ಕಡಿಮೆ ಇರುವವರೆಗೆ ಎಲ್ ಕೆ ಜಿ ಯಿಂದ ಪಿಜಿಯವರೆಗೆ ತಾಯಿ ಖಾತೆಗೆ ಹಣ ಜಮೆ ಮಾಡುವುದು. ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕ ತಲೆತಗ್ಗಿಸುವಂತೆ ಮಾಡುವೆ ಎಂದರು. ಇನ್ನೂ ಸಾವಿರಾರು ಸುಮಂಗಲಿಯರು ಕುಂಭ ಹೊತ್ತು ಸ್ವಾಗತ ಕೋರಿದರು. ಸುಮಾರು ಜನರನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಜನರ ಉತ್ಸಾಹ ಕಂಡು ಸ್ಥಳದಲ್ಲೇ ಪಕ್ಷದ ಅಭ್ಯರ್ಥಿ ಮೈಬೂಬ ಅರಬ ಎಂದು ಘೋಷಿಣೆ ಮಾಡಿದರು.