ಇಂಡಿಯಲ್ಲಿ ಪ್ರಪ್ರಥಮ ಮಹಿಳೆಯರಿಂದ ಬಾರಿಗೆ ಗಜಾನನನ ಪ್ರತಿಷ್ಟಾಪನೆ, ಜನಮನ ಸೆಳೆದ ಮಹಿಳೆಯರು
ಇಂಡಿ : ನಗರದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಮಂಡಳಿ ವತಿಯಿಂದ ಗಜಾನನ ಪ್ರತಿಷ್ಠಾಪನೆ ಮಾಡಿ ಜನಮನ ಸೆಳೆದಿದ್ದು ಹಾಗೂ ನಗರದ ಜನರಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ನಗರದ ಶಾಂತೇಶ ನಗರದಲ್ಲಿ ಮಹಿಳಾ ಮಂಡಳಿ ವತಿಯಿಂದ ಅಗಸ್ಟ್ 27 ರಿಂದ 5 ದಿನಗಳ ಕಾಲ ಗಜಾನನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಆಯೋಜಿಸಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಇನ್ನೂ 5 ದಿನಗಳ ಕಾಲ ನಿರಂತರವಾಗಿ ಪ್ರತಿದಿನ ಸಂಜೆ ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ಜರುಗಿದವು. ಅದಲ್ಲದೇ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಬಾಜಿನರಾದ ಪಾರ್ವತಿ ಸೋನ್ನದ ಅವರಿಗೆ ಹಾಗೂ ವಿವಿಧ ಸಾಂಸ್ಕೃತಿಕ/ಸ್ಪರ್ಧೆ ಗಳಲ್ಲಿ ವಿಜೇತರಿಗೆ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಸನ್ಮಾನಿಸಿ ಗೌರವಿಸಿದರು.
ಇನ್ನೂ ಇದೆ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಂತೇಶ ನಗರ ಮಹಿಳಾ ಸಂಘಟನೆ ವತಿಯಿಂದ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ರಾಜೇಶ್ವರಿ ಅ ಜೈನ್, ಗೌರವಾಧ್ಯಕ್ಷೆ ಆನುಸುಯಾ ಕೆ ಪಾಟೀಲ,ಉಪಾಧ್ಯಕ್ಷೆ ಶೈಲಾ ಚಂ ಕಂಬಾರ, ಕಾರ್ಯದರ್ಶ ಶಾಂತಾ ಸಂ ಮಹೇಂದ್ರಕರ, ಖಜಾಂಚಿ ಭಾರತಿ ಬ ಕವದಿ, ಹಾಗೂ ಸರ್ವ ಸದಸ್ಯರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.
ಸದರಿ ಕಾರ್ಯಕ್ರಮವನ್ನು ಶ್ರೀಮತಿ ಆರತಿ ಚವ್ಹಾಣವರರು ನೇರವೇರಿಸಿದರು.