ಇಂಡಿ: ಸಾಹಿತ್ಯ ಕ್ಷೇತ್ರಕ್ಕೆ ವಿಜಯಪೂರ ಜಿಲ್ಲೆ ಅಪಾರ ಕೊಡುಗೆ ನೀಡಿದೆ. ಅದರಲ್ಲೂ ಇಂಡಿ ತಾಲ್ಲೂಕು ಸಾಹಿತ್ಯಕ್ಕೆ ತನ್ನದೇಯಾದ ಕೊಡುಗೆ ನೀಡಿದೆ. ಹಲಸಂಗಿಯ ಮಧುರಚನ್ನರು ಅಗರಖೇಡದ ಶ್ರೀರಂಗರು, ಸೇರಿದಂತೆ ಹಲವು ಮಹಾನ್
ಕವಿಗಳು ಇಲ್ಲಿ ಆಗಿ ಹೋಗಿದ್ದಾರೆ ಎಂದು ಹಿರಿಯ
ಪತ್ರಕರ್ತ ವಾಸುದೇವ ಹೆರಕಲ್ ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ತಡವಲಗಾ ಗ್ರಾಮದಲ್ಲಿ ವಿಶ್ವಚೇತನ ಶೈಕ್ಷಣಿಕ ಸಾಂಸ್ಕøತಿಕ ಸಾಹಿತಿಕ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆ, ಶ್ರೀಮರುಳಸಿದ್ದೇಶ್ವರ ದೇವಸ್ಥಾನ ಸಮಿತಿ ಜೋಡಗುಡಿಯ ಹತ್ತಿರ ಸಾಹಿತಿಕ
ಮತ್ತು ಸಾಂಸ್ಕøತಿಕ ವೇದಿಕೆ ಶಾಖೆ ಇಂಡಿ ವತಿಯಿಂದ
ಹಮ್ಮಿಕೊಂಡ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ “ಭೀಮಾತೀರ” ಎಂಬ ಕುಖ್ಯಾತಿ ಪಡೆದಿರುವುದು ವಿಪರ್ಯಾಸವೇ ಸರಿ. ಇದು ಭೀಮಾತೀರ ಅಲ್ಲ “ಚಿಂತಕರ ಚಾವಡಿ” ಸಾಹಿತಿಗಳ ಬೀಡು ಹೃಯವಂತರ ನಾಡು. ಈಗ ಜಾತ್ರಾ ಮಹೋತ್ಸವ ಸೇರಿದಂತೆ ಹಲವು ಕಡೆಗಳಲ್ಲಿಯೂ ಕನ್ನಡ ನಾಡು ನುಡಿಯ ಚಿಂತನೆ ನಡೆಯುತ್ತಿರುವುದೇ ಉದಾಹರಣೆ
ಎಂದರು.
ಸಾನಿಧ್ಯವಹಿಸಿದ್ದ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಐರು ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳು ಆಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಸರಕಾರಗಳಿಂದ ರೈತಪರ ವಿಚಾರಧಾರೆಗಳು ನಡೆಯಲಿ. ಇಂತಹ ಹತ್ತು ಕನ್ನಡ ಕಾರ್ಯಕ್ರಮಗಳನ್ನು
ಮಾಡುತ್ತೇವೆ. ಕನ್ನಡ ನಶಿಸುತ್ತಿದೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಕನ್ನಡ ಮತ್ತಷ್ಟು ಶ್ರೀಮಂತಗೊಳ್ಳುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ
ಆಶಯ ನುಡಿಗಳನ್ನಾಡಿದರು. ರಾಜೋತ್ಸವ ಪ್ರಶಸ್ತಿ ಪುರಸ್ಕøತರಾದ ಫ.ಗು. ಸಿದ್ದಾಪೂರ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,
ಮಹಾರಾಷ್ಟ್ರ ಗಡಿಭಾಗದಲ್ಲಿ ನಾವಿದ್ದರೂ ಇಲ್ಲಿ ಮಹಾರಾಷ್ಟ್ರದ ಮರಾಠಿ ಭಾಷೆ ಪ್ರಭಾವ ಬೀರಿಲ್ಲ. ಬದಲಾಗಿ ಮಹಾರಾಷ್ಟ್ರದ ಹಲವು ಭಾಗಗಗಳಲ್ಲಿ
ಕನ್ನಡ ಭಾಷೆ ಪ್ರಭಾವ ಬೀರಿದೆ. ಕನ್ನಡ ಭಾಷೆ
ನಮ್ಮ ಭಾಗದಲ್ಲಿ ಮತ್ತಷ್ಟು ಸದೃಢವಾಗಿದೆ
ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆದಾರ ಚಂದ್ರಶೇಖರ ರೂಗಿ, ತಮ್ಮಣ್ಣಾ
ಪೂಜಾರಿ, ಗ್ರಾಮ ಪಂ ಅಧ್ಯಕ್ಷ ರಮೇಶ ಹೊಸಮನಿ,
ಶಿವಾನಂದ ಶಾಸ್ತ್ರಿ, ಬಾಬುಸಾಹುಕಾರ ಮೇತ್ರಿ, ಬಸವರಾಜ ಇಂಡಿ, ಮಳಸಿದ್ದ ಬ್ಯಾಳಿ, ಡಾ.ಕಾಂತು ಇಂಡಿ, ಪಿ.ಎಂ ಹೂಗಾರ, ಬಿ.ಎಸ್ ಪಾಟೀಲ, ಶಂಕರ ಚವ್ಹಾಣ, ಅಶೋಕ ಮಿರ್ಜಿ, ಸಚೀನ ರೂಗಿ, ಗುಂಡು ರೂಗಿ, ಬಾಬುರಾಜ ಕಲಘಟಗಿ, ಸಚಿನ ಇಂಡಿ, ಸೇರಿದಂತೆ ತಡವಲಗಾ ಗ್ರಾಮದ ಗಣ್ಯರು ವೇದಿಕೆಯಲ್ಲಿದ್ದರು.
ಡಾ.ಕಾಂತು ಇಂಡಿ ಸ್ವಾಗತಿಸಿ, ಶಿಕ್ಷಕ ಬಸವರಾಜ
ಗೊರನಾಳ ನಿರೂಪಿಸಿ, ಬಸವರಾಜ ಕಲಘಟಗಿ,
ಎಸ್.ಐ.ಸುಗೂರ ವಂದಿಸಿದರು.
ಇಂಡಿ: ಗಡಿನಾಡು ಕನ್ನಡ ಸಾಹಿತ್ಯ
ಸಮ್ಮೇಳನವನ್ನು ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕøತ ಪ.ಗು ಸಿದ್ದಾಪೂರ, ಕಸಾಪ
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ,
ತಡವಲಗಾ ಹಿರೇಮಠದ ರಾಚೋಟೇಶ್ವರ
ಶಿವಾಚಾರ್ಯರು ಉದ್ಘಾಟಿಸಿದರು.