ಮಸ್ಕಿ: ಸೃಷ್ಟಿಯ ಒಡಲಲ್ಲಿ ಜನನ ಎನ್ನುವುದು ಸಹಜವಾದ ಪ್ರಕ್ರಿಯೆ, ಪ್ರಪಂಚಕ್ಕೆ ಕಾಲು ಇಡಬೇಕಾದ್ರೆ ತಮ್ಮೊಂದಿಗೆ ವಿಶೇಷತೆಯನ್ನ ಕೆಲ ಜೀವಿಗಳು ನೋಡುಗರ ಕೌತುಕವನ್ನ ಹೆಚ್ಚಿಸುವ ಮೂಲಕ ನಿಬ್ಬೆರಗಾಗಿಸುತ್ತವೆ.
ಅಂತಹದೊಂದು ಘಟನೆ ಬಿಸಿಲನಾಡು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪರಸಾಪುರ ಗ್ರಾಮದಲ್ಲಿ ಕೋಳಿ ಮರಿಯೊಂದು ಮೂರು ಕಾಲುಗಳನ್ನು ಹೊಂದುವ ಮೂಲಕ ಎಲ್ಲರ ಉಬ್ಬೇರುವಂತೆ ಮಾಡಿದೆ.
ಸಹಜವಾಗಿ ಕೋಳಿಗಳಿಗೆ ಎರಡು ಕಾಲು ಇರುತ್ತವೆ. ಆದರೆ ಕೋಳಿ ಮರಿಗೆ ಮೂರು ಕಾಲು ಇರುವುದರಿಂದ ಈ ಕೋಳಿಮರಿಯನ್ನ ವೀಕ್ಷಿಸಲು ಸುತ್ತ ಮುತ್ತಲಿನ ಗ್ರಾಮಗಳಿಂದ ಜನರು ಧಾವಿಸುತ್ತಿದ್ದಾರೆ.
ಇನ್ನು 15 ದಿನಗಳಿಂದ ಕೋಳಿಮರಿ ಆರೋಗ್ಯವಾಗಿದ್ದು, ನಾಗಮ್ಮ ಎನ್ನುವರು ಈ ಕೋಳಿ ಮರಿಗಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.