ಶ್ರೀವಿಜಯ ಅವರ ಜನ್ಮದಿನದ ಪ್ರಯುಕ್ತ ವಿವಿಧ ರೋಗಗಳ ಉಚಿತ ತಪಸಾಣೆ
ಇಂಡಿ: ಹಿರೇಬೇವನೂರ ಗ್ರಾಮದ ಕುಮಾರ ಶ್ರೀವಿಜಯ
ವಡ್ಡರ ಇವರ ಜನ್ಮದಿನದ ಹಬ್ಬದ ಪ್ರಯುಕ್ತ ಉಚಿತ
ಹೃದಯ ರೋಗ, ನರರೋಗ ಮೂತ್ರಪಿಂಡದ
ಕಲ್ಲು ಕ್ಯಾನ್ಸರ್ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು
ಬೆಂಗಳೂರು ಮಹಾನಗರದ ಸಪ್ತಗಿರಿ ಮತ್ತು ಸಂಜೀವಿನಿ
ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂಡಿ ಪಟ್ಟಣದ ಅಗರಖೇಡ ರಸ್ತೆ ಎಡಭಾಗದ ಬಿಸಿಎಂ ಹಾಸ್ಟೆಲ್ ಹತ್ತಿರ ಇರುವ ಮಾಳಿ ದವಾಖಾನೆಯಲ್ಲಿ ಫೆ.9 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:00 ವರೆಗೆ
ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಹೃದಯ ರೋಗ, ನರರೋಗ ಹಾಗೂ ಮೂತ್ರಪಿಂಡದಲ್ಲಿ ಕಲ್ಲಿನ
ತೊಂದರೆ ಇರುವವರು ಮಾತ್ರ ಪಾಲ್ಗೊಳ್ಳಬಹುದು.
ಶಿಬಿರದಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ ಹೊಂದಿದವರಿಗೆ ಮಾತ್ರ ಉಚಿತವಾಗಿ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಉಚಿತ ಚಿಕಿತ್ಸೆ ಪಡೆದುಕೊಳ್ಳವರು ಬಿಪಿಎಲ್ ಹಾಗೂ ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು. ಶಿಬಿರದಲ್ಲಿ ಸಪ್ತಗಿರಿ ಆಸ್ಪತ್ರೆ ವೈದ್ಯರು, ಡಾ. ಆರ್.ಎಂ. ಮಾಳಿ, ಡಾ. ಸಿದ್ದು ಪರಗೊಂಡ ಹಾಗೂ ಆರೋಗ್ಯ ಇಲಾಖೆಯ ಕಲ್ಲಪ್ಪ ಕಲ್ಲಪ್ಪನವರ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕ ಭೀಮಾಶಂಕರ ವಡ್ಡರ ಪ್ರಕಟಣೆಗೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ನಂ
9740309258 ಸಂಪರ್ಕಿಸಲು ಪರಕಟಣೆ ತಿಳಿಸಿದೆ.