ರಾಯಚೂರು: ಸ್ಪರ್ಶ್ ಆಸ್ಪೆತ್ರೆ ಬೆಂಗಳೂರು ಹಾಗೂ ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಇವರ 82 ನೇ ಜನ್ಮದಿನೋತ್ಸವದ ಅಂಗವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಮಾರ್ಗದ ಮಹಾದ್ವಾರ,ಮಲದಕಲ್ ಉದ್ಘಾಟನಾ ಸಮಾರಂಭ ಹಾಗೂ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಏ.24 ರಂದು ಮಲದಕಲ್ ಕ್ರಾಸ್ ಬಳಿ ಬೆಳಿಗ್ಗೆ 10 ರಿಂದ ಮಧ್ಯಹ್ನ 3 ರ ವರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಸ್ಟಿಸ್ ಶಿವರಾಜ ಪಾಟೀಲ್ ಅಭಿಮಾನಿ ಬಳಗದ ರಾಜಶೇಖರ್ ಪಾಟೀಲ್ ಮುಸ್ಟುರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಜನರಲ್ ಮೆಡಿಸಿನ್, ಸಕ್ಕರೆ ಕಾಯಿಲೆ, ಕೀಲು ಮತ್ತು ಮೂಳೆ ಚಿಕಿತ್ಸೆ,ಮಕ್ಕಳ ರೋಗ ತಜ್ಞರು,ಮೂತ್ರ ಪಿಂಡ ರೋಗ ಚಿಕಿತ್ಸೆ,ನರರೋಗ ಶಸ್ತ್ರ ಚಿಕಿತ್ಸೆ,ಹೃದಯ ರೋಗ ಶಸ್ತ್ರ ಚಿಕಿತ್ಸೆ, ಹೇರಿಗೆ ಮತ್ತು ಸ್ತ್ರೀರೋಗ ತಜ್ಞರು ಉಚಿತ ಆರೋಗ್ಯ ತಪಾಸಣಾ ಮಾಡಲಿದ್ದಾರೆ ಎಂದರು. ಕಾರ್ಯಕ್ರಮವನ್ನು ದೇವದುರ್ಗ ಶಾಸಕ ಕೆ.ಶಿವನ ಗೌಡ ನಾಯಕ ಉದ್ಘಾಟಿಸಲಿದ್ದಾರೆ.
ದಿವ್ಯ ಸಾನಿಧ್ಯವನ್ನು ಗಬ್ಬೂರು ಶ್ರೀ ಬುದಿ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ವಿಶ್ರಾಂತಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್, ಜಾಗಟಗಲ್ ಬೆಟ್ಟದಯಪ್ಪ ತಾತನವರು ಉಪಸ್ಥಿತಿ ಇರುವರು. ಮುಖ್ಯ ಅಥಿತಿಗಳಾಗಿ ಸಂಸದ ರಾಜಾ ಅಮರೇಶ್ವರ ನಾಯಕ,ನಗರ ಶಾಸಕ ಶಿವರಾಜ ಪಾಟೀಲ್ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರುನಾಥ್ ಪಾಟೀಲ್ ಮಲದಕಲ್, ಬಾಲಪ್ಪ ಗೌಡ,ಅಮರೇಗೌಡ,ಬಸವರಾಜ ಇದ್ದರು.