ನಗರದ ಹಲವು ಸ್ಲಂ ಪ್ರದೇಶಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಕಣ್ಣು ಶಸ್ತ್ರಚಿಕಿತ್ಸೆ ಶಿಬಿರ
ವಿಜಾಪುರ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲ್ ಅಹ್ಮದ್ ಬಾಗಮಾರೆ ನೇತೃತ್ತದಲ್ಲಿ “ಪ್ರತಿಯೊಬ್ಬರ ಆರೋಗ್ಯ ಅತ್ಯಗತ್ಯ” ಮಿಷನ್‌ನಡಿ, ವಿಜಯಪುರ ನಗರದ ಹಲವು ಸ್ಲಂ ಪ್ರದೇಶಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಕಣ್ಣು ಶಸ್ತ್ರಚಿಕಿತ್ಸೆ ಶಿಬಿರ, ಸಾಮಾನ್ಯ ವೈದ್ಯಕೀಯ ತಪಾಸಣೆ, ಉಚಿತ ಔಷಧ ವಿತರಣೆ ಮತ್ತು ಅಭಾ ಹೆಲ್ತ್ ಕಾರ್ಡ್ ನೋಂದಣಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದುಈ ಮಿಷನ್‌ನಡಿಯಲ್ಲಿ ಬಡ ಮತ್ತು ಅಗತ್ಯವಂತ ಜನರಿಗೆ ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವುದು,ಉತ್ತಮ ಚಿಕಿತ್ಸೆ ಜೊತೆಗೆ 5 ಲಕ್ಷದವರೆಗೆ ಆರೋಗ್ಯ ವಿಮೆ ಸಿಗುವಂತೆ ಮಾಡುವುದು.ಈ ಎಲ್ಲಾ ಶಿಬಿರಗಳು ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಆಸ್ಪತ್ರೆ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.ಆಗಸ್ಟ್ 20ರಂದು ಮೊದಲ ಶಿಬಿರವನ್ನು ವಾರ್ಡ್ ನಂ.23 ರೋಷನ್ ಶಾದಿ ಮಹಲನಲ್ಲಿ ನಡೆಸಲಾಯಿತು.
ಎರಡನೇ ಶಿಬಿರವನ್ನು ವಾರ್ಡ್ ನಂ. 20 ಟಿಪ್ಪು ಸುಲ್ತಾನ್ ಶಾದಿ ಹಾಲ್
ನಲ್ಲಿನಡೆಸಲಾಯಿತು. 198 ಜನರ ಕಣ್ಣು ತಪಾಸಣೆ ಮಾಡಲಾಯಿತು ಹಾಗೂ ಅವರಲ್ಲಿ 26 ಜನರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಲಾಯಿತು . ಇದೇ ಶಿಬಿರದಲ್ಲಿ 348 ಜನರ ಸಾಮಾನ್ಯ ವೈದ್ಯಕೀಯ ತಪಾಸಣೆ ನಡೆಯಿತು ಮತ್ತು 220 ಬಿಪಿಎಲ್ ಕುಟುಂಬಗಳಿಗೆ ಅಭಾ ಹೆಲ್ತ್ ಕಾರ್ಡ್‌ಗಳು ಮಾಡಲಾಯಿತು.ಕಾರ್ಯಕ್ರಮ ಉದ್ದೆಶೀಸಿ ಮಾತನಾಡಿದ ಶಕೀಲ್ ಅಹ್ಮದ್ ಬಾಗಮಾರೆ ಅವರು:“ನಮ್ಮ ಪ್ರಯತ್ನ ವಿಜಯಪುರದ ಪ್ರತಿಯೊಬ್ಬ ನಾಗರಿಕರು ಆರೋಗ್ಯವಂತನಾಗಿರಬೇಕು. ನಮ್ಮ ಉದ್ದೇಶ ಕೇವಲ ಶಿಬಿರಗಳನ್ನು ಆಯೋಜಿಸುವುದಲ್ಲ, ಬದಲಾಗಿ ಮಾನವೀಯತೆಗೆ ಸೇವೆ ಸಲ್ಲಿಸುವುದು ಮತ್ತು ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು. ಉಚಿತ ವೈದ್ಯಕೀಯ ಶಿಬಿರಗಳನ್ನು ನಗರದ ಪ್ರತಿಯೊಂದು ವಾರ್ಡ್‌ನಲ್ಲಿ ಆಯೋಜಿಸಲಾಗುವುದು ಎಂದರು . ಕಾರ್ಯಕ್ರಮದ ವಿಶೇಷ ಅತಿಥಿಯಾಗ ಆಗಮಿಸಿ ಮಾತ್ನಾಡಿದ ಸಮಾಜ ಸೇವಕ ಜಮೀಲ ಬಾಂಗಿರವರು ಇಂತಹ ಅರ್ಥಪೊರ್ಣ ಕಾರ್ಯಕ್ರಮಗಳು ನಮ್ಮ ವಾರ್ಡನಲ್ಲಿ ಜರಗುತ್ತಿರುವು.
ನಮ್ಮ ವಾರ್ಡನ ಪ್ರತಿಯೊಬ್ಬರ ಸದಯೊಪಗ ಪಡೆದು ಕೊಳ್ಳಬೇಕಾಗಿ ವಿನಂತಿಸಿದರು ಈ ಕಾರ್ಯಕ್ರಮದ ರೊವಾರಿ ಶಕೀಲ ಬಾಗಮಾರೆ ಕೃತಜ್ಞತೆ ಸಲ್ಲುಸಿತ್ತೆನೆ ಎಂದರು ಇದೆ ಸಂರ್ಧಬದಲ್ಲಿ ಮಾತ್ನಾಡಿದ ಜಲ ನಗರ ಬ್ಲಾಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮುಲ್ಲಾ ಈ ಆರೋಗ್ಯ ಶೀಬಿರ ಜಾತ ಮತ ಬೇದ ಎನ್ನದೆ ಮಾನವಿಯತೆಗಾಗಿ ಹಮ್ಮಿಕೊಳಲಾಯಿತು ಇತ್ತಿಚಿನ ದಿನಗಳಲ್ಲಿ ಹವಾಮಾನ ವೈಪರತ್ಯೆದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಹಾಗೂ ಮಕ್ಕಳಿಗೆ ವಿಶೇಷವಾಗಿ ಕಾಳಜಿ ವಹಿಸಲಾಯಿತು ಎಂದರು.
ಇದೆ ಸಂರ್ಧಬದಲ್ಲಿ ಕಾಂಗ್ರಸ್ ಪಕ್ಷದ ಮುಖಂಡರಾದ ಹಮೀದ ಮಾನಗೂಳಿ ಸರ್ಫರಾಜ ಅಗಸಬಾಳ ಪೀರಾಹ್ಮದ ಹಡಗಲಿ ತಾಜೋದ್ದಿನ ಖಲೀಪಾ , ಪಾರೂಕ ಕರಜಗಿ ರಪೀಕ ಶೇಕ್ ,ಆಬೀದ ಇಲಕಲ ,ಇಲಿಯಾಸ ಮುಲ್ಲಾ , ಉಪಸ್ಥಿತರಿದ್ದರು



















