ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ
ಹಿಂದೂ ಮುಸ್ಲಿಮ್ ಸೌಹಾರ್ದತೆಗಾಗಿ
ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಶ್ರಾವಣ ಸೌಹಾರ್ದ ಕೂಟ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಏರ್ಪಡಿಸಲಾಗಿದೆ ಎಂದು ಮನಿಯಾರ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಹೇಳಿದರು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪವಿತ್ರ ಶ್ರಾವಣ ಮಾಸದ ಸಂಭ್ರಮದ ಭಾಗವಗಿ ಹಿಂದೂ ಮುಸ್ಲಿಮ್ ಸೌಹಾರ್ದತೆಗಾಗಿ
ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ನಿಂದ ಶ್ರಾವಣ ಸೌಹಾರ್ದ ಕೂಟ ಅ ೨೦ ಬುಧುವಾರ ಏರ್ಪಡಿಸದ್ದೇವೆ .
ಕಳೆದ ೧೨ ವರ್ಷಗಳಿಂದ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆಯನ್ನು ಅಗಲಿದ ತಮ್ಮ ತಂದೆ ಮದನಸಾಬ ತಾಯಿ ಅಮೀನಬಿ ಅವರ ಸ್ಮರಣಾರ್ಥ ಮಾಡಿಕೊಂಡ ಬರುತ್ತಿದ್ದು ಬಡವರ ಸೇವೆಯನ್ನು ಮಾಡುವ ಮೂಲಕ ಅವರಲ್ಲಿ ತಮ್ಮ ಹೆತ್ತವರನ್ನು ಕಾಣುತ್ತಿರುವೆ.
ಸಮಾಜ ಸೇವಕ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ, ವಿಜಯಪುರ ಉದ್ಯಮಿ ಸಮಾಜ ಸೇವಕ ರೂಪಸಿಂಗ್ ಲೋನಾರೆ ಮಾತನಾಡಿ ಅಯೂಬ್ ಮನಿಯಾರ ಅವರ ಸಮಾಜಸೇವೆ ಜಾತ್ಯಾತೀತ ಧರ್ಮಾತೀತವಾದದು ಇದು ನಿಜಕ್ಕೂ ಮಾದರಿಯ ಸಮಾಜಸೇವೆ ಅಗಲಿದ ತಂದೆ ತಾಯಿ ಸ್ಮರಣಾರ್ಥ ಮಾಡಿಕೊಂಡು ಬರುತ್ತಿದ್ದಾರೆ ಈ ಪುಣ್ಯ ಕಾರ್ಯದಲ್ಲಿ ನಾವು ಸಹ ಕೈ ಜೋಡಿಸುತ್ತೇವೆ ತಾಲೂಕಿನ ಜನರು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು .
ಅಗಸ್ಟ್ 9 ರಂದು ತಾಳಿಕೋಟೆ ಅನುಗ್ರಹ ಆಸ್ಪತ್ರೆಯಲ್ಲಿ, ಅ ೧೦ ರವಿವಾರ ಮುದ್ದೇಬಿಹಾಳ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಮುದ್ದೇಬಿಹಾಳ ನಾಲತವಾಡ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಉಚಿತ ನೆತ್ರ ತಪಾಸಣೆ ಮಾಡಲಾಗುತ್ತದೆ ಈ ತಪಾಸಣೆಯಲ್ಲಿ ಯಾರು ಕಣ್ಣಿನ ಶಸ್ತ್ರಚಿಕಿತ್ಸೆ ಗೆ ಆಯ್ಕೆಯಾಗುತ್ತಾರೆ ಅವರಿಗೆ ಅ 11 ರಿಂದ ಅ 14 ವರಗೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಯ್ಕೆಯಾಗುವರೂಂದಿಗೆ ಪರಿವಾರ ಓರ್ವ ಸದಸ್ಯರ ಕಡ್ಡಾಯವಾಗಿ ಬರತಕ್ಕದು ಹೆಸರು ನೋಂದಣಿಗೆ 8123277124 /8088046448
ಉಚಿತ ಬಸ್ ವ್ಯವಸ್ಥೆ ಇರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಗಣ್ಯ ಉದ್ಯಮಿ ಫಯಾಜ್ ಸಾಸನೂರ, ಹಾಜಿ ಗೋಲದಂಜಸಾಬ, ಆರ್ ಎಲ್ ಮಮದಾಪೂರ,ಮಹಿಬೂಬ ಹಡಲಗೇರಿ, ಯುವ ಉದ್ಯಮಿ ಸಮಾಜಸೇವಕ ಆಪ್ತಾಬ್ ಮನಿಯಾರ ಬಾಬಾ ಎಕೀನ್ , ಮೈನುದ್ದಿನ ತಡಕಲ್, ಯೂಸುಫ್ ಸಾತಿಹಾಳ,ಸೇರಿದಂತೆ ಉಪಸ್ಥಿತರಿದ್ದರು.