ಇಂಡಿಯಿಂದ ಉಚಿತ ಬಸ್ ಸೇವೆ, ಎಲ್ಲಿಯವರೆಗೆ ಗೊತ್ತಾ..!
ಇಂಡಿ : ವಿಜಯಪುರದಲ್ಲಿ ಜ. 2 ರಂದು ನಡೆಯುವ
ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮಕ್ಕೆ ಝಳಕಿ, ಹೋರ್ತಿ, ಸಾಲೋಟಗಿ, ಅಗರಖೇಡ, ತಾಂಬಾ, ಅಥರ್ಗಾ, ನಾದ ಕೆಡಿ ಯಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳು ಮತ್ತು ಹಿರೇಮಸಳಿ, ಪಡನೂರ, ತಡವಲಗಾ, ರೋಡಗಿ. ಮಿರಗಿ, ಭತಗುಣಕಿ,
ನಿಂಬಾಳ ಆರ್.ಎಸ್, ನಿಂಬಾಳ ಕೆಡಿ, ಹಿಂಗಣಿ, ಬರಗುಡಿ, ಆಳೂರ, ಮಾವಿನಹಳ್ಳಿ, ಖೇಡಗಿ,ಭ್ಯುಯ್ಯಾರ ಗ್ರಾಮಗಳಿಂದ ಆರ್.ಎಂ.ಶಹಾ ಶಾಲೆಯ ಬಸ್ ಗಳನ್ನು ಉಚಿತವಾಗಿ ಸೌಲಭ್ಯ ನೀಡಲಾಗುವದೆಂದು ಶಾಸಕರ ಜನ ಸಂಪರ್ಕ ಕಚೇರಿ ಪ್ರಕಟನೆ ಮೂಲಕ ತಿಳಿಸಿದೆ.