ರೈತ ಸಂಘದ ನೂತನ ಗ್ರಾಮ ಘಟಕ ಅಧ್ಯಕ್ಷರಾಗಿ: ಅಬ್ದುಲ್ ಗುತ್ತೆದಾರ ಆಯ್ಕೆ
ಅಫಜಲಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಗುತ್ತೆದಾರ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ್ ಜಮಾದಾರ್, ಜಿಲ್ಲಾ ಸಂಚಾಲಕರಾದ ನಾಗೇಶ್ ಹಡಲಗಿ ಹಾಗೂ ಅಫಜಲಪುರ ತಾಲೂಕು ಅಧ್ಯಕ್ಷರಾದ ಮಂಜುನಾಥ ನಾಯಕೋಡಿ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಶೈಲ್ ಗೋಳೆ ಅವರ ನೇತೃತ್ವದಲ್ಲಿ ಆಯ್ಕೆ ಮಾಡಿದರು.ಇನ್ನೂ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಪ್ರಕಾಶ ಹಳಗೋದಿ, ಕಾರ್ಯಧ್ಯಕ್ಷರಾಗಿ ಸಾತಪ್ಪ ಚಿನ್ನಮಳ್ಳಿ, ಉಪಾಧ್ಯಕ್ಷರಾಗಿ ವಂಕಾರಿ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಅಚಲೇರಿ,ಕಾರ್ಯದರ್ಶಿಯಾಗಿ ಶ್ರೀಮಂತ ನಾಯಕೊಡಿ, ಸಹಕಾರದರ್ಶಿಯಾಗಿ ಗಂಗಪ್ಪ ಸುತಾರ,ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ಕಲಶೆಟ್ಟಿ,ಖಜಾಂಜಿಯಾಗಿ ರಾಜಕುಮಾರ ನಾಯ್ಕೋಡಿ, ಸಂಚಾಲಕರಾಗಿ ಮಹದೇವ ಬಳಗಾರಿ,ವಕ್ತಾರರಾಗಿ ಸೈಫನ್ ತೆಲ್ಲುಣಗಿ ಇನ್ನು ಸದಸ್ಯರಾಗಿ ವಸಿಂ ಚೌದ್ರಿ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ಮಲಿಕ್ ಕೊಳ್ಳಿ ಪ್ರಶಾಂತ ರಾಚೊಗೊಳ, ವೀರೇಶ್ ಜಮಾದಾರ್ ,ಶ್ರೀಶೈಲ್ ರೆಡ್ಡಿ ಸೇರಿದಂತೆ ರೈತ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಉಮೇಶ್ ಅಚಲೇರಿ ಅಫಜಲಪುರ ತಾಲ್ಲೂಕು ಕಲ್ಬುರ್ಗಿ ಜಿಲ್ಲೆ.