ಲಿಂಗಸೂಗೂರು: ಶ್ರಮಿಕ ವರ್ಗದ ಮತ್ತು ರೈತ ನಾಯಕರು, ಸಾಮಾಜಿಕ ಚಿಂತಕರು, ಸಮಾಜ ಸೇವಕರು, ಬಡ ಸಮುದಾಯಗಳ ಕಲ್ಯಾಣಕಾರಕರಾದ ಲಿಂಗಸುಗುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ರವರಿಗೆ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಗೌರವಾರ್ಥವಾಗಿ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು Indian Empire university ನೀಡಿದೆ.
ಈ ಪ್ರಮುಖ ಪ್ರಶಸ್ತಿ ಲಭಿಸಿದಕ್ಕೆ ಮಾಜಿ ಶಾಸಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.