ಅನ್ನದಾತರೆ ಹುಷಾರ್..! ರಸಗೊಬ್ಬರ ಖರಿದಿಸುವ ಮುನ್ನ..!
ವಿಜಯಪುರ : ಪರವಾನಗಿ ಇಲ್ಲದೇ ಅಕ್ರಮವಾಗಿ ಕೀಟನಾಶಕ ಹಾಗೂ ನೊಂದಾಯಿತ ಇಲ್ಲದ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದ ಕೃಷಿ ಪರಿಕರ ಮಾರಾಟ ಮಳಿಗೆ ಮೇಲೆ ಕೃಷಿ ಅಧಿಕಾರಿಗಳು ಹಾಗೂ ಜಾಗೃತ ಕೋಶದ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಕ್ರಶಕ್ ಅಗ್ರಿ ಬಯೋಟೆಕ್ ಹಾಗೂ ಕೃಷಿಟೆಕ್ ಪ್ರೈ.ಲಿಮಿಟೆಡ್ ಮಳಿಗೆ ಮೇಲೆ ಅಧಿಕಾರಿಗಳು ದಾಳಿಗೈದಿದ್ದಾರೆ. ದಾಳಿ ವೇಳೆ 28 ಲಕ್ಷದ 74 ಸಾವಿರ ಮೌಲ್ಯದ 963 ಲೀಟರ್ ಕೀಟನಾಶಕ ಹಾಗೂ ನೋಂದಾಯಿತ ಇಲ್ಲದ 22 ಲಕ್ಷದ 16 ಸಾವಿರ ಮೌಲ್ಯದ 6675 ಕೆಜಿಯ ವಿವಿಧ 6 ತರಹದ ರಸಗೊಬ್ಬರಗಳನ್ನು ಜಪ್ತಿಗೈದಿದ್ದಾರೆ. ಇನ್ನು ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್ ಎ ಇನಾಮದಾರ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಯಪ್ರದಾ ದಶವಂತ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.