ಇಂಡಿ : ತಹಶೀಲ್ದಾರ ಹಾಗೂ ಉಪ ತಹಶೀಲ್ದಾರಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬಾಳ ಕೆಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಇದೇ ವೇಳೆಯಲ್ಲಿ ಡಿಸಿ ಸುನೀಲಕುಮಾರ ಮಾತನಾಡಿ, ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದೇ ಕಾಲಹರಣ ಮಾಡಲಾಗುತ್ತಿದೆ ಎಂದು ದೂರುಗಳು ಬಂದಿದೆ. ಅದಕ್ಕಾಗಿ ತಹಶೀಲ್ದಾರ ಹಾಗೂ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಬೇಕು. ಅದನ್ನು ಬಿಟ್ಟು ಕಚೇರಿಯಲ್ಲಿ ಕುಳಿತುಕೊಳ್ಳುವುದು ಅಲ್ಲ ಎಂದು ಎಚ್ಚರಿಕೆ ನೀಡಿದರು. ಮತ್ತೇ ಇದೇ ತರಹ ದೂರುಗಳು ಬರದಂತೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಖೀಲ ಕರ್ನಾಟಕ ನಾಯಕ ತಳವಾರ ಜನಾಂದ ಹಿತರಕ್ಷಣಾ ಸಮಿತಿ ಮುಖಂಡ ನಿಂಗಪ್ಪ ತಳವಾರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ತುರ್ತು ಪ್ರಮಾಣ ಪತ್ರ ಕೊಡಲು ವಿನಂತಿಸಿಕೊಂಡರು. ಸಮುದಾಯದ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಯಾಣಿ ಗಣವಲಗಾ, ಸದಸ್ಯ ರಾಮಣ್ಣ ತಳವಾರ, ಶ್ರಿಮಂತ ಜೇವೂರ, ಬಸವರಾಜ ತಳವಾರ, ಮಲ್ಲಿಕಾರ್ಜುನ ವಾಲಿಕಾರ, ಶಂಕ್ರೆಪ್ಪ ತಳವಾರ, ಶರಣಪ್ಪ ಗಿರಣಿ ಉಪಸ್ಥಿತರು.