ಮಹಾನ್ ವ್ಯಕ್ತಿಗಳ ಆದರ್ಶ ಅನುಸರಿಸಿ -ಶಾಸಕ ಕಟಕದೊಂಡ
ಇಂಡಿ : ಮನುಕುಲಕ್ಕೆ ಮಿಲಿಯಾಂತರ ವರ್ಷಗಳ ಇತಿಹಾಸವಿದೆ. ಪ್ರತಿ ಹಂತದಲ್ಲೂ ಸಮಾಜ ಬದಲಾಗುತ್ತ ಬಂದಿದ್ದರ ಹಿಂದೆ ಮಹಾನ್ ವ್ಯಕ್ತಿಗಳ ಪಾತ್ರವಿದೆ. ಪ್ರಗತಿಪರ ವಿಚಾರಗಳನ್ನು ಅವರು ಪ್ರಸ್ತುತ ಪಡಿಸುತ್ತ ಸಮಾಜ ಬದಲಾವಣೆ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ. ಅಂತಹ ವ್ಯಕ್ತಿಗಳ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಕರ್ನಾಟಕ ಆಂಗ್ಲ ಮಾಧ್ಯಮ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿ ಸತ್ತ ನಂತರವೂ ಇತರರಿಗೆ ಬದುಕಲು ಸ್ಪೂರ್ತಿ ಯಾಗುವಂತಹ ವಿಚಾರಧಾರೆ ಹೊಂದಿರಬೇಕು.ಯೌವ್ವನ ಎಂಬುದು ಮನಸ್ಸಿಗೆ ಸಂಬAದಿಸಿದ್ದೇ ಹೊರತು ದೇಹಕ್ಕಲ್ಲ. ಚೈತನ್ಯವೇ ಚಿರ ಯೌವ್ವನ, ಓದು ಆಟ ಪಾಠ ಸಿನಿಮಾ ಸಾಹಿತ್ಯ ಮನೋರಂಜನೆ ಎಲ್ಲದರಲ್ಲೂ ಉತ್ತಮ ಅಭಿರುಚಿಯ ಬೆಳೆಸಿಕೊಳ್ಳಬೇಕು. ಜತೆ ಜತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಸಾರ್ಥಕ ಬದುಕು ನಿಮ್ಮ ದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾಹುಕಾರ ಕುಮಸಗಿ, ಉಪಾದ್ಯಕ್ಷ ಸಂಗಣ್ಣಾ ಈರಾಬಟ್ಟೆ, ಪ್ರಭುಲಿಂಗ ಕತ್ತಿ, ಟಿ.ಎಸ್.ಅಲಗೂರ, ಮುಖ್ಯೋಪಾಧ್ಯಾಯ ಎ.ಎಸ್.ಬೊರಾಮಣ ,ಬಿ.ಕೆ.ಉಕಮನಾಳ, ಉಷಾ ಹಿರೇಮಠ, ರೇಣುಕಾ ಗೊಟಗಿ ಮಾತನಾಡಿದರು.
ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಮಳಸಿದ್ದಪ್ಪಾ ಗುಡ್ಡೊಡಗಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟಕ ಕಲಾವಿಧೆ ಲಲಿತಾ ದಶವಂತ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,ಶಿವಪುತ್ರ ಕಡಕೋಳ,ಮಾಧುರಿ ಅಳಂದಿಕರ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ,ಸರೋಜಿನಿ ಕಡಕೋಳ, ಬಿಈಡಿ ಮಹಾವಿದ್ಯಾಲಯದ ಪ್ರಾಚಾರ್ಯ ಸುಧಾ ಸುಣಗಾರ, ಅಜೀತಕುಮಾರ ಕತ್ತಿ ವೇದಿಕೆಯ ಮೇಲಿದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಇಂಡಿ ಪಟ್ಟಣದ ಬಿಈಡಿ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಿ ಶಾಸಕ ಕಟಕದೊಂಡ ಮಾತನಾಡಿದರು.



















