ಹಳ್ಳಿಗಳ ಬದುಕಿನಲ್ಲಿ ಜಾನಪದ ಅಡಕವಾಗಿದೆ : ಮೇಜರ್ ಸಿದ್ದಲಿಂಗಯ್ಯ ಹಿರೇಮಠ
ಇಂಡಿ : ಜಾನಪದ ಎಂಬುದು ಎಲ್ಲದರಲ್ಲೂ ಹಾಸುಹೊಕ್ಕಾಗಿದೆ, ನಮ್ಮ ಹಿಂದಿನ ಕಾಲದ ಆಚರಣೆಗಳುಲ್ಲಿ ಹಬ್ಬ ಉತ್ಸವಗಳಲ್ಲಿ ಹಳ್ಳಿಗಳ ಬದುಕಿನಲ್ಲಿ ಜಾನಪದ ಅಡಕವಾಗಿದೆ, ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಮಹತ್ವದ ಕೆಲಸ ನಡೆಯಬೇಕು ಎಂದು ಹಿರಿಯ ಅಧಿಕಾರಿ ಧಾರವಾಡದ ಡಿಮಾನ್ಸ್ ನ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು,
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಕಷ್ಟದ ಪರಿಸ್ಥಿಯಲ್ಲಿಯೂ ಚೆನ್ನಾಗಿ ಓದುವ ಸಂಕಲ್ಪ ಮಾಡಿ ಉತ್ತಮ ಜೀವನವನ್ನು ಕಟ್ಟಿಕೊಂಡು ತಂದೆತಾಯಿಗಳಿಗೆ ಹೆಮ್ಮೆ ತರುವ ಹಾಗೆ ಬದುಕಬೇಕು ಎಂದರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ರಮೇಶ ಆರ್ .ಎಚ್ ಮಾತನಾಡಿ ‘ ಜಾನಪದ ಉಳುವಿಗೆ ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದರು, ಪ್ರಾಸ್ತಾವಿಕವಾಗಿ ಸಾಂಸ್ಕೃತಿಕ ವಿಭಾಗದ ಸಂಯೋಜಕ ಪ್ರೊ.ಸಂಗಮೇಶ ಹಿರೇಮಠ ಮಾತನಾಡಿ ಇಂಡಿ ತಾಲ್ಲೂಕು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಹಲಸಂಗಿ ಗೆಳೆಯರ ಕಾರ್ಯ ಶ್ಲಾಘನೀಯ ಎಂದರು. ಐಕ್ಯುಎಸಿ ವಿಭಾಗದ ಸಂಯೋಜಕ ಪ್ರೊ.ರವಿಕುಮಾರ ಅರಳಿ ಸ್ವಾಗತಿಸಿದರು. ಕು, ಛಾಯಾ ಹೂಗಾರ ಪ್ರಾರ್ಥಿಸಿದರು. ಪ್ರೊ. ಸುರೇಖಾ ರಾಠೋಡ ವಂದಿಸಿದರು. ಡಾ. ರಮೇಶ ಕತ್ತಿ ನಿರೂಪಿಸಿದರು.
ಮೆರವಣಿಗೆ: ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ದ ನಿಮಿತ್ಯ ವಿವಿಧ ಕಲಾತಂಡಗಳು, ಎತ್ತಿನಬಂಡಿಯೊಂದಿಗೆ, ಡೊಳ್ಳಿನ ಕಲಾಮೇಳಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಹಳ್ಳಿ ಉಡುಗೆಯನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಜಗತ್ತಿನ ಎಲ್ಲಾ ಬಗೆಯ ಸಾಹಿತ್ಯದ ತಾಯಿ ಬೇರು ಜಾನಪದವಾಗಿದೆ. ಸಮಾಜದ ಓರೆ ಕೊರೆಗಳನ್ನು ತಿದ್ದುವ ಹಾಗೂ ಮನುಷ್ಯನ ಸಕಾರಾತ್ಮಕತೆಯ ಚಿಂತನೆಗೆ ಹಚ್ಚುವ ದಿವ್ಯ ಔಷಧವಾಗಿದೆ. ಜಾನಪದ ಸಾಹಿತ್ಯಕ್ಕೆ ಮೊದಲ ಸಂಕಲನದ ಹೊತ್ತಿಗೆ ತಂದವರು ಇಂಡಿ ಭಾಗದ ಮಧುರ ಚನ್ನರು. ಎಸ್ ಬಿ ಕೆಂಬೋಗಿ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಸಂಘ ವಿಜಯಪುರ
ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವದ ಕಾರ್ಯಕ್ರಮಕ್ಕೂ ಮುಂಚೆ ಕಾಲೇಜು ಆವರಣ ಮತ್ತು ವಿಜಯಪುರ ರಸ್ತೆಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.