ಇಂಡಿ : ಅತೀವೃಷ್ಟಿ ಹಾಗೂ ಭೀಮೆಯ ಪ್ರವಾಹದ ದುಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ದಸರಾ ಹಬ್ಬದ ಪ್ರಯುಕ್ತ ಮೂರು ನೂರು ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಭೀಮೆಯ ಪ್ರವಾಹದಿಂದ ಜನರು ಬದುಕು ಅತ್ಯಂತ ಚಿಂತಾ ಜನಕವಾಗಿದೆ. ಒಂದು ಕಡೆ ಮೇಘರಾಜನ ಅಬ್ಬರ ಹೆಚ್ಚಾಗಿದ್ದು, ಇನ್ನೊಂದು ಕಡೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹಾಗೂ ಸಿನಾ ನದಿಯಿಂದ ಲಕ್ಷಾಂತರ ಕ್ಯೂಸಕ್ಸ್ ನೀರು ಭೀಮೆಗೆ ಹರಿದು ಬರುತ್ತಿದೆ. ಇದರಿಂದ ಬುಯ್ಯಾರ ಗ್ರಾಮದಲ್ಲಿ ಪ್ರವಾಹ ಅವಾಂತರ ಸೃಷ್ಟಿ ಮಾಡಿದ್ದು ಜನರು ಬದುಕು ದುಸ್ತರವಾಗಿದೆ. ಆದರೆ ನಾಡುದೇವಿಯ ಮತ್ತು ದಸರಾ ಹಬ್ಬ ಪ್ರಯುಕ್ತ ಹೆಣ್ಣು ಮಕ್ಕಳು ಉಪವಾಸ ಇರುವುದನ್ನು ಕಂಡು, ಮನುಕುಲಕಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ ಹಾಗೂ ಅವರ ತಂಡ ಗ್ರಾಮದಲ್ಲಿ ಆಹಾರ ಕಿಟ್ ಹಂಚುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಎಸ್ಟಿ ಮೂರ್ಚಾ ಅಧ್ಯಕ್ಷ ರವಿ ವಗ್ಗೆ ಮಾತನಾಡಿದ ಅವರು, ನಾವೆಲ್ಲಾ ನದಿ ತೀರದಲ್ಲಿ ಜನಿಸಿದವರು. ಪ್ರವಾಹ ಹೊಸದೇನಲ್ಲ, ಆದರೆ ಪ್ರವಾಹ ಬಂದಾಗ ಕಷ್ಟದಲ್ಲಿರುವ ನಮ್ಮ ಜನರಿಗೆ ಸಹಾಯ ಸಹಕಾರ ಮಾಡುವುದು ನಮ್ಮ ಧರ್ಮ. ಹಾಗೂ ಮಾನವೀಯ ಧರ್ಮ ಎಂದು ಹೇಳಿದರು. ಇದಕ್ಕೆ ಸಂಸದ ರಮೇಶ್ ಜಿಗಜಿಣಗಿ ಅವರ ಪ್ರೇರಣೆ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಪ್ಪ ದಿಗಸಂಗಿ, ಸಿದ್ದಪ್ಪಾ ಬೇಡರ, ಆಕಾಶ ನಾಯಕೋಡಿ, ಭೀಮಾಶಂಕರ ನಾಟಿಕಾರ, ರಾಹುಲ್ ಗೋಳಸಾರ, ಶ್ರೀಕೃಷ್ಣ ನಾಯಕೋಡಿ, ಮರೆಪ್ಪ ತಳಕೇರಿ, ಅಮೋಗಿ ಬೇಡರ, ಮಲಕಾರಿ ಸರಸಂಬಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಭುಯ್ಯಾರ ಗ್ರಾಮದಲ್ಲಿ ರವಿಕಾಂತ್ ವಗ್ಗೆ ಹಾಗೂ ಗೆಳೆಯರು, ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿದರು.