ನೂತನ ತಾಲ್ಲೂಕು ಕೇಂದ್ರದಲ್ಲಿ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ : ಅಧ್ಯಕ್ಷ ಸುರೇಶ ಲೆಂಗಟಿ
ಕಮಲಾಪುರ : ತಾಲುಕು ಕೇಂದ್ರವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ತಾಲ್ಲೂಕಿನ ಕನ್ನಡಿಗರಲ್ಲಿ ಸಂತಸ ಉಂಟು ಮಾಡಿದೆ.
ತಾಲ್ಲೂಕು ಕೇಂದ್ರ ಕಮಲಾಪುರ ಪಟ್ಟಣದಲ್ಲಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ, ಅಲ್ಲದೆ ನವೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸುರೇಶ ಲೆಂಗಟಿ ಹೇಳಿದರು.
ಕಮಲಾಪುರದ ಕನ್ನಡ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಪ್ರಥಮ ಸಾಹಿತ್ಯ ಸಮ್ಮೇಳನದ 2 ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೆಂಪು ಬಾಲೆಗೆ ಪ್ರಸಿದ್ಧಿ ಪಡೆದಿರುವ, ಶಿಕ್ಷಕರ ತವರೂರು ಎಂದೇ ಖ್ಯಾತಿ ಪಡೆದಿರುವ ಹಾಗೂ ಬುದ್ಧಿವಂತರ ತಾಲ್ಲೂಕು ಎಂಬ ಹೆಮ್ಮೆಯನ್ನು ಹೊತ್ತಿರುವ ಕಮಲಾಪುರದ
ಪ್ರಥಮ ಸಮ್ಮೇಳನದ ತೀವ್ರ ಕುತೂಹಲ ಮೂಡಿಸಿರುವ
ಸಮ್ಮೇಳನದ ಸರ್ವಾದ್ಯಕ್ಷರ ಆಯ್ಕೆಗಾಗಿ ಇಲ್ಲಿಯ ವರೆಗೆ 6 ಜನ ತಾಲುಕಿನ ಸಾಹಿತಿಗಳ ಹೆಸರುಗಳ ಪಟ್ಟಿ ಸಿದ್ಧವಾಗಿದ್ದು, ಒಂದೆರಡು ದಿನಗಳಲ್ಲಿ ಸಮ್ಮೇಳನದ ಸರ್ವಾದ್ಯಕ್ಷರ ಅಯ್ಕೆ ಮಾಡಲಾಗುವುದು, ಜೊತೆಜೊತೆಗೆ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಕಾರ್ಯಾದ್ಯಕ್ಷರರ ಅಯ್ಕೆ ಸಹ ಎಲ್ಲರ ಒಪ್ಪಿಗೆ ಪಡೆದು ಮಾಡಲಾಗುತ್ತದೆ, ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಮಲಾಪುರ ಯೋಜನಾಧಿಕಾರಿ ಕಲ್ಲಣಗೌಡ ಪಾಟೀಲ್ ಮಾತನಾಡಿ ನಮ್ಮ ಸಂಸ್ಥೆ ನಿರಂತರವಾಗಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸುತ್ತಿದೆ, ಅಲ್ಲದೇ ತಾಲ್ಲೂಕಿನ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದೆ, ಅಲ್ಲದೇ ಸಮ್ಮೇಳನ ಯಶಸ್ಸಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಘಟಕದ ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ ಸ್ವಾಗತಿಸಿದರು. ಮಹಾಗಾಂವ ಕಸಾಪ ವಲಯದ ಅಧ್ಯಕ್ಷ ಅಂಬಾರಾಯ ಮಡ್ದೆ ನಿರೂಪಿಸಿದರು, ಚೇತನ ಮಹಾಜನ ವಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೂಲಗೆ, ಉಪಾಧ್ಯಕ್ಷ ಚನ್ನವೀರ ದಸ್ತಾಪುರ, ರಮೇಶ ಕಟ್ಟಿಮನಿ, ಕಸಾಪ ಗ್ಯಾನಪ್ಪ, , ರೇವಣಸಿದ್ದಪ್ಪ ಇತರರು ಇದ್ದರು.