ಇಂಡಿ : ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಲ್ಲೂಕು ಬಸ್ ನಿಲ್ದಾಣದಲ್ಲಿ ಸರ್ಫರಾಜ್ ಕೊಕಣಿ ಎಂಬವರು ಬೇಕರಿ ಅಂಗಡಿ ಇಟ್ಟಿಕೊಂಡಿದ್ದರು. ಆ ಅಂಗಡಿಗೆ ಬೆಂಕಿ ಅವಘಡ ನಡೆದಿದೆ. ಅಲ್ಲದೇ ಲಕ್ಷಾಂತರ ಮೌಲ್ಯ ವಸ್ತು ಹಾನಿಯಾಗಿದ್ದು, ಬೇಕರಿಯಲ್ಲಿರುವ ವಿವಿಧ ಐಟಂಗಳು ಸುಟ್ಟು ಭಸ್ಮ ವಾಗಿವೆ. ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಇಂಡಿ ಶಹರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.