ಇಂಡಿ : ಆಕಸ್ಮಿಕವಾಗಿ ಬೆಂಕಿ ಅವಘಡದಿಂದ 12 ಕುರಿಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದಿದೆ. ಕಮಲಾಬಾಯಿ ನಿಜಲಿಂಗಪ್ಪ ಬುಕ್ಕಿ ಎಂಬುವರಿಗೆ ಸೇರಿದ ಸುಮಾರು 12 ಕುರಿಗಳು ಬೆಂಕಿಗೆ ಆಹುತಿ ಆಗಿದ್ದು, ಕೂಡಲೆ ಸಂಬಂಧಿಸಿದ ಇಲಾಖೆ ಪರಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿಡಿ ಪಾಟೀಲ್ ಆಗ್ರಹಿಸಿದರು. ಕುಟುಂಬ ಸದಸ್ಯರಿಗೆ ಭೇಟಿ ನೀಡಿ ಸ್ವಾಂತನ ಹೇಳಿದರು. ಇದೆ ಸಂದರ್ಭದಲ್ಲಿ ಹಣಮಂತ ದ್ಯಾಮೋಗಳ,ಈಸುನಾಥ ಪೂಜಾರಿ, ಭೀಮರಾಯ ಪೂಜಾರಿ,ರಾಮ ಬನಸೋಡೆ,ಈರೇಶ ಜುಮನಾಳ, ಮಲ್ಲಿಕಾರ್ಜುನ ಅಳಗಿ, ಮಹೇಶ್ ಬುಕ್ಕಿ, ಆನಂದ್ ಬನಸೋಡೆ ಮುಂತಾದ ನಾಯಕರು ಉಪಸ್ಥಿತರಿದ್ದರು