ಸೈಕಲ್ಸ್ ಗೋದಾಮಿನಲ್ಲಿ ಅಗ್ನಿ ಅವಘಡ..!
ವಿಜಯಪುರ : ಸೈಕಲ್ಸ್ ಹಾಗೂ ಸೈಕಲ್ ಟೈರ್ಸ್ ಇಟ್ಟಿದ್ದ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ನಗರದ ಗಣಪತಿ ಚೌಕ್ ಬಳಿಯ ಗೋದಾಮಿನಲ್ಲಿ ನಡೆದಿದೆ. ಎನ್ ಜೆ ಮೆಹತಾ ಸೈಕಲ್ಸ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಅವಘಡ ಆಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಕಿ ಅವಘಡದಲ್ಲಿ ಅಧಿಕ ಮೌಲ್ಯದ ಸೈಕಲ್ ಗಳು ಹಾಗೂ ಸೈಕಲ್ ಟೈರ್ ಗಳು ಭಸ್ಮವಾಗಿವೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.