ವಿಜಯಪುರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ : ಡಿಸಿ ಟಿ. ಭೂಬಾಲನ್..
ವಿಜಯಪುರ: ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2024ರ ಜನವರಿ 22ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,76,073 ಗಂಡು, 9,42,757 ಹೆಣ್ಣು ಹಾಗೂ 218 ಇತರೆ ಸೇರಿದಂತೆ ಒಟ್ಟು 19,19,048 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಅಂದರೆ, ದಿನಾಂಕ: 27-10-2023 ರಿಂದ 09-12-2023ರವರೆಗೆ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 18,99,248 ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 19,19,048 ಮತದಾರರಿದ್ದು, ಒಟ್ಟು 19,800 ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
19,19,048 ಮತದಾರರು:
ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ 26- ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ 1,11,339 ಗಂಡು, 1,09,166 ಹೆಣ್ಣು ಹಾಗೂ 22 ಇತರೆ ಮತದಾರರು ಸೇರಿದಂತೆ ಒಟ್ಟು 2,20,527 ಮತದಾರರಿದ್ದಾರೆ.
ಅದರಂತೆ, 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 1,13,858 ಗಂಡು, 1,08,459 ಹೆಣ್ಣು ಹಾಗೂ 20 ಇತರೆ ಮತದಾರರು ಸೇರಿದಂತೆ 2,22,337 ಮತದಾರರಿದ್ದಾರೆ.
28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 1,08,882 ಗಂಡು, 1,05,579 ಹೆಣ್ಣು ಹಾಗೂ 15 ಇತರೆ ಮತದಾರರು ಸೇರಿದಂತೆ ಒಟ್ಟು 2,14,476 ಮತದಾರರಿದ್ದಾರೆ.
29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 1,11,684 ಗಂಡು, 1,07,836 ಹೆಣ್ಣು ಹಾಗೂ 4 ಇತರೆ ಮತದಾರರು ಸೇರಿದಂತೆ ಒಟ್ಟು 2,19,524 ಮತದಾರರಿದ್ದಾರೆ. 30-
ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿ 1,39,974 ಗಂಡು, 1,42,494 ಹೆಣ್ಣು ಹಾಗೂ 93 ಇತರೆ ಮತದಾರರು ಸೇರಿದಂತೆ ಒಟ್ಟು 2,82,561 ಮತದಾರರಿದ್ದಾರೆ.
31-ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ 1,39,582 ಗಂಡು, 1,32,540 ಹೆಣ್ಣು ಹಾಗೂ 17 ಇತರೆ ಮತದಾರರು ಸೇರಿದಂತೆ 2,72,139 ಮತದಾರರಿದ್ದಾರೆ.
32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ 1,27,441 ಗಂಡು, 1,19,583 ಹೆಣ್ಣು ಹಾಗೂ 18 ಇತರೆ ಮತದಾರರು ಸೇರಿದಂತೆ 2,47,042 ಮತದಾರರಿದ್ದಾರೆ.
33-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ 1,23,313 ಗಂಡು, 1,17,100 ಹೆಣ್ಣು ಹಾಗೂ 29 ಇತರೆ ಮತದಾರರು ಸೇರಿದಂತೆ ಒಟ್ಟು 2,40,442 ಮತದಾರರಿದ್ದು, ಒಟ್ಟು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ 9,76,073 ಗಂಡು, 9,42,757 ಹೆಣ್ಣು ಹಾಗೂ 218 ಇತರೆ ಮತದಾರರು ಸೇರಿದಂತೆ ಒಟ್ಟು 19,19,048 ಮತದಾರರಿದ್ದಾರೆ.
2085 ಮತಗಟ್ಟೆಗಳು: ಅಂತಿಮ ಮತದಾರರ ಪಟ್ಟಿಯನುಸಾರ ವಿಜಯಪುರ ಜಿಲ್ಲೆಯಲ್ಲಿ 2085 ಮತಗಟ್ಟೆಗಳಿದ್ದು, ವಿಧಾನಸಭಾವಾರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 245 ಮತಗಟ್ಟೆಗಳು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252 ಮತಗಟ್ಟೆಗಳು, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 230 ಮತಗಟ್ಟೆಗಳಿವೆ. ಬಬಲೇಶ್ವರ ಮತಕ್ಷೇತ್ರದಲ್ಲಿ 243 ಮತಗಟ್ಟೆಗಳು, ಬಿಜಾಪುರ ನಗರ ಮತಕ್ಷೇತ್ರದಲ್ಲಿ 282 ಮತಗಟ್ಟೆಗಳಿವೆ. ನಾಗಠಾಣ ಮತಕ್ಷೇತ್ರದಲ್ಲಿ 297, ಇಂಡಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳಿದ್ದು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ 2085 ಮತಗಟ್ಟೆಗಳು ಅಂತಿಮವಾಗಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ನಿರಂತರವಾಗಿರುವುದರಿಂದ ಅರ್ಹ ಸಾರ್ವಜನಿಕರು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ವೋಟರ್ ಹೆಲ್ಫ ಲೈನ್ ಮೊಬೈಲ್ ಆಪ್ ಮೂಲಕವಾಗಲಿ, ವಿಎಸ್ಪಿ ಪೋರ್ಟಲ್ ಹಾಗೂ www.ceo.karnataka.gov.in ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.