ಮುದ್ದೇಬಿಹಾಳ:ಪಟ್ಟಣದ ೫ನೇ ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣ ವೀರೇಶ್ವರರ ದಾಸೋಹ ಶನಿವಾರ ಜರುಗಿದ ಮುದ್ದೇಬಿಹಾಳ ತಾಲೂಕಾ ಕಸಾಪ ೫ನೇ ಸಮ್ಮೇಳನ ಬಹುತೇಕ ಜಿಲ್ಲಾ ಮಟ್ಟಕ್ಕೂ ಮೀರಿ ಸೇರಿದ ಕನ್ನಡ ಮನಸ್ಸುಗಳಿಗೆ ಸಿದ್ದಪಡಿಸಿದ ನಾನಾ ಬಗೆಯ ಊಟ ಸವಿದು ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದರು.
ರಾತ್ರಿಯಿಂದಲೇ ಆಗಮಿಸಿದ ಕನ್ನಡಾಭಿಮಾನಿಗಳಿಗೆ ಊಟ ಹಾಗೂ ಬೆಳಗಿನ ಉಪಹಾರಕ್ಕೆ ಯಾವದೇ ತೊಂದರೆಯಾಗದಂತೆ ನಿಗಾವಹಿಸಿದ ಉಸ್ತುವಾರಿಗಳು ಅಚ್ಚುಕಟ್ಟಾಗಿ ತಮಗೆ ವಹಿಸಿದ ಕಾರ್ಯ ನಿರ್ವಹಿಸಿದರು.
ಸುಮಾರು ೧೦ ಸಾವೀರಕ್ಕೂ ಹೆಚ್ಚು ಸೇರುವ ಕನ್ನಡಾಭಿಮಾನಿಗಳಿಗೆ ಗ್ರಾಮೀಣ ಭಾಗದ ಬಾಡೂಟ ಬೆಲ್ಲದ ಸಿರಾ, ಸಜ್ಜೆ ಮತ್ತು ಜೋಳದ ರೊಟ್ಟಿ, ಬದನೆಕಾಯಿ, ಹೆಸರು ಕಾಳು ಪಲ್ಯೆ, ಚಪಾತಿ ಅನ್ನ ಸಾರು ಸೇರಿದಂತೆ ನಾನಾ ಬಗೆಯ ಸಿದ್ದಪಡಿಸಿದ ಭೋಜನ ಅಭಿಮಾನಿಗಳನ್ನು ಕೈ ಬೀಸುವಂತೆ ಅಚ್ಚುಕಟ್ಟಾಗಿ ಕೌಂಟರ್ಗಳ ವ್ಯವಸ್ಥೆ ಮಾಡಲಾಗಿತ್ತು.
ಮುದ್ದೇಬಿಹಾಳ ಪಟ್ಟಣ ಸೇರಿ ಪಕ್ಕದ ನಿಡಗುಂದಿ ಹಾಗೂ ಸರೂರ ಗ್ರಾಮದಿಂದ ಆಗಮಿಸಿದ್ದ ಸುಮಾರು ೩೦೦ ಮಹಿಳೆಯರು ಅಡುಗೆ ಮಾಡುವುದು, ಅಭಿಮಾನಿಗಳಿಗೆ ಊಟ ಬಡಿಸುವ ಜವಾಬ್ದಾರಿ ಹೊತ್ತಿದ್ದು ಕೌಂಟರ್ಗಳಲ್ಲಿನ ಸರದಿ ಸಾಲು ಗಮನ ಸೆಳೆಯಿತು. ಈ ವೇಳೆ ಉಸ್ತಾವಾರಿ ವಹಿಸಿದ್ದ ಸಿ.ಪಿ.ಸಜ್ಜನ, ಮಹಾಂತೇಶ ಗಂಗನಗೌಡ್ರ, ರಾಹುಲ್ ಪಾಟೀಲ, ಮುತ್ತು ರಾಯಗೊಂಡ, ಸತೀಶ ಕುಲಕರ್ಣಿ, ಮಾರುತಿ ನಲವಡೆಮಾಂತು ಕಡಿ, ಸುನಿಲ್ ಇಲ್ಲೂರ, ಸಂಗಣ್ಣ ಮೇಲಿನಮನಿ, ಶರಣ ಹಾಗೂ ಅಶೋಕ ಚೆಟ್ಟೆರ ಟೊಂಕ ಕಟ್ಟಿ ನಿಂತು ಊಟವ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು.
ಕೇಂದ್ರ ಸರಕಾರದ ಪ್ರಚಾರ: ಸಮ್ಮೇಳನದ ವೇದಿಕೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ನಾನಾ ಬಗೆಯ ವಸ್ತು ಪ್ರದರ್ಶನ ಮಳಿಗೆಗಳ ಪೈಕಿ ಅಂಚೆ ಇಲಾಖೆಯು ತನ್ನ ಯೋಜನೆಗಳಲ್ಲಿ ಮಹಿಳಾ ಸಮ್ಮಾನ ಉಳಿತಾಯ ಯೋಜನೆ ಕುರಿತು ಆಗಮಿಸಿದ್ದ ಮಹಿಳಾ ಅಭಿಮಾನಿಗಳಿಗೆ ಅರಿವು ಮೂಡಿಸಿದರು. ಅಲ್ಲದೇ ಹಲವು ಮಹಿಳೆಯರು ಸ್ಥಳದಲ್ಲೇ ಯೋಜನೆಯ ಸದುಪಯೋಗ ಪಡೆದುಕೊಂಡರು.