‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ
ವಿಜಯಪುರ : ಭಾರತ ದೇಶ ಭವ್ಯ ಸಂಸ್ಕೃತಿಯ ದೇಶ, ಇಲ್ಲಿನ ಹಬ್ಬಗಳು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ.ಈ ನಿಟ್ಟಿನಲ್ಲಿ ಪ್ರಸ್ತುತ ನವರಾತ್ರಿ ಉತ್ಸವ ಮಕ್ಕಳಲ್ಲಿ,ದೇವಿಯ ಮಹತ್ವ ಹಾಗೂ ಸಾಂಪ್ರದಾಯಿಕ ಮಹತ್ವವನ್ನು ತಿಳಿಸುವಲ್ಲಿ ಇಂತಹ ಹಬ್ಬಗಳು ಮಕ್ಕಳ ಕಲಿಕೆಗೆ ಹಾಗೂ ದೇಶದ ಸಂಸ್ಕೃತಿಗೆ ಪೂರಕವಾಗಿವೆ.ಎಂದು ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ರೊಳ್ಳಿ ರವರು ಹೇಳಿದರು. ಅವರು ತಾಲೂಕಿನ ನಾಗಠಾಣ ಗ್ರಾಮದ ಶಿವಾವತಾರಿ ಶ್ರೀ ಸಿದ್ಧಾರೂಢ ಶಿಕ್ಷಣ ಸಂಸ್ಥೆಯ ಶ್ರೀ ಚಂದ್ರಶೇಖರ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನವರಾತ್ರಿ ದಸರಾ ಉತ್ಸವ’ದ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ನಿಮಿತ್ಯ ಶಾಲಾ ಮಕ್ಕಳಿಗೆ ನವರಾತ್ರಿ ಉತ್ಸವದ ಹಿನ್ನಲೆ, ಹಾಗೂ ದೇವಿಯ ವಿವಿಧ ರೂಪದ ಆಕರ್ಷಕ ವೇಷಭೂಷಣದೊಂದಿಗೆ ಮಕ್ಕಳಲ್ಲಿ ಹಬ್ಬದ ಆಚರಣೆಯು ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳಾದ ಆರ್.ಎಲ್.ಚಾಕರೆ ಸಹ ಶಿಕ್ಷಕರಾದ ಆರ್.ಎಸ್.ಲೋಣಿ, ಎಸ್.ಆರ್.ಅಂಕಲಗಿ, ಪಿ.ಜೆ.ಜೇವೂರ, ಕೆ.ಎ.ಅಂಕಲಗಿ, ಜಿ.ಆರ್.ಗದ್ಯಾಳ, ಆರ್.ಮನಗೂಳಿ, ಎ.ಎಸ್.ಔರಸಂಗ, ಎಸ್.ವಿ.ಹಂಡಿ, ಎಸ್.ಅಡಹಳ್ಳಿ ,ಎಂ.ಹಚ್ಚಡದ ಮುಂತಾದವರು ಉಪಸ್ಥಿತಿತರಿದ್ದರು.
ಧನ್ಯವಾದಗಳು ಇಂತಿ ನಿಮ್ಮ ವಿಶ್ವಾಸಿ
ಶ್ರೀ ಆರ್.ಎಲ್.ಚಾಕರೆ.
ಮುಖ್ಯ ಗುರುಗಳು
ಮೊ.+91 83105 80361