ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ನಾಲತವಾಡ ಪಟ್ಟಣದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಸ್ಥಳಿಯ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಅಶೋಕ ಕಾಂಬಳೆ ಭೇಟಿ ಭೇಟಿ ನೀಡಿ ರಸಗೊಬ್ಬರದ ಗುಣಮಟ್ಟ ಮತ್ತು ವಿತರಣೆ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಅಂಗಡಿಗಳಲ್ಲಿ ರಸಗೊಬ್ಬರ ದಾಸ್ತಾನು ಇದ್ದರೂ ವಿನಃ ಕಾರಣ ಬಡ ಮತ್ತು ಶ್ರೀಮಂತ ರೈತರು ಎನ್ನುವ ಮನೋಭಾವನೆ ಬದಿಗೊತ್ತಿ ಪ್ರತಿ ರೈತರಿಗೂ ಬೇಡಿಕೆ ಅನುಗುಣವಾಗಿ ಗೊಬ್ಬರ ವಿತರಿಸಬೇಕು, ನಿಗಧಿತ ದರಕ್ಕಿಂತ ಹೆಚ್ಚಿಗೆ ದರ ವಸೂಲಿ ದೂರಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿದರು.
ಹಲವು ರೈತರಿಗೆ ಗೊಬ್ಬರ ಬಳಕೆಯ ಮಾಹಿತಿ ಕೊರತೆ ಕಂಡು ಬರುತ್ತಿದ್ದು ತಾವು ವಿತರಣೆ ವೇಳೆ ಬಳಕೆ ಕುರಿತು ಮಾಹಿತಿ ನೀಡಬೇಕು, ಹರಳು ಯೂರಿಯಾ ರಸಗೊಬ್ಬರಕ್ಕೆ ರ‍್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ರೈತರಿಗೆ ತಿಳಿಸಬೇಕು,ಮುಂದಿನ ದಿನಗಳಲ್ಲಿ ಯಾವದೇ ರೋಗಗಳು ಕಾಣಿಸಿಕೊಳ್ಳದಂತೆ ಮುಂಜಾಗೃತವಾಗಿ ಇಳುವರಿ ಹೆಚ್ಚಳಕ್ಕೆ ಕೀಟನಾಶಕ ಮತ್ತು ರೋಗನಾಶಕಗಳ ಜೊತೆಗೆ ಮಿಶ್ರಣಗೊಳಿಸಿ ಬೆಳೆಗಳಿಗೆ ಸಿಂಪರಣೆ ಕುರಿತು ಖರೀದಿ ವೇಳೆ ಮಾಹಿತಿ ನೀಡಿ ಎಂದು ತಿಳಿಸಿದರು.
ಮಾಹಿತಿ: ಇದೇ ವೇಳೆ ವಿವಿಧ ರಸಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಡಿಎಪಿ ಹೊರತು ಪಡಿಸಿ ಕಾಂಪ್ಲೆಕ್ಸ್ ಎನ್‌ಪಿಕೆ ೧೦:೨೬:೨೬, ೨೦:೨೦:೦:೧೩ ಮತ್ತು ೧೨:೩೨:೧೬ ಹಾಗೂ ನ್ಯಾನೋ ಡಿಎಪಿ ಬಳಸಲು ತಾವೂ ತಿಳಿಸಬೇಕು ಮತ್ತು ನಾವೂ ಸಹ ನಮ್ಮ ರೈತ ಸಂಪರ್ಕ ಕೇಂದ್ರದ ರೈತರಿಗೆ ಈ ಕುರಿತು ಮಾಹಿತಿ ನೀಡುತ್ತಿದ್ದೇವೆ ಎಂದರು.
ಸ್ಥಳಿಯ ರಸಗೊಬ್ಬರ ಮಾರಾಟ ಕೇಂದ್ರಗಳಿಂದ ವಿವಿಧ ಗೊಬ್ಬರಗಳನ್ನು ಸಂಶೋಧನಕ್ಕೆ ರವಾನೆ ಮಾಡಿ ಫಲಿತಾಂಶ ಪಡೆದುಕೊಂಡಿದ್ದು ಯಾವದೇ ಕಳಪೆ ಗೊಬ್ಬರದ ಕುರಿತು ಫಲಿತಾಂಶ ಸಿಕ್ಕಿಲ್ಲ, ರೈತರು ಬೆಳೆಗಳಿಗೆ ರೋಗಬಾಧೆ ಬರದಂತೆ ಈಗಲೇ ಕೃಷಿ ಇಲಾಖೆ ನೀಡಿದ ಸಲಹೆಗಳನ್ನು ಪಾಲಿಸಬೇಕು
–ಅಶೋಕ ಕಾಂಬಳೆ,ಕೃಷಿ ಅಧಿಕಾರಿ ನಾಲತವಾಡ.