ಇಂಡಿ: ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರ ಗ್ರಾಮದಲ್ಲಿ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ನಿರ್ದೇಶನಾಲಯ ಸಂಸ್ಥೆ ಪಿಜಿಡಿಹೆಚಪಿ ಕ್ಷೇತ್ರ ಅಧ್ಯಯನ ಮಂಜುಳಾ ಜೋಶಿ ಆಯೋಜನೆ ಮಾಡಿದ್ದ ಪ್ರಸವಪೂರ್ವ ಲಿಂಗಪತ್ತೆ ಹೆಣ್ಣು ಭ್ರೂಣ ಹತ್ಯೆ ತಡೆ ಕಾನೂನು ನಿಷೇಧ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ದಿವಾನಿ ನ್ಯಾಯಾಧೀಶರಾದ ಎ ಹೆಚ ಖಣಗಾವಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನ್ಯಾಯಾಧೀಶರು ಹೆಣ್ಣು ಭ್ರೂಣ ಹತ್ಯೆ ಹೀನಕೃತ್ಯ. ಗಂಡು ಸಂತತಿಯ ವ್ಯಾಮೋಹದಿಂದ ತಪ್ಪು ಕಲ್ಪನೆ ಮೂಢ ನಂಬಿಕೆಯಿಂದ ಹೆಣ್ಣು ಸಂತತಿ ವಿನಾಶದತ್ತ ಸಾಗುತ್ತಿದೆ. ಪ್ರತಿಯೊಬ್ಬರು ಸಮಾಜದಲ್ಲಿ ಗಮನಿಸಬೇಕಾದ ಸಂಗತಿ ಲಿಂಗಾನುಪಾತ ಕಾಪಾಡಲು ಗಂಡಿರಲಿ ಹೆಣ್ಣಿರಲಿ ಮಗು ಮಗುನೆ. ಹೆಣ್ಣು ಮಗುವನ್ನು ಉಳಿಸಿ ಉಳಿಸಿ ಬೆಳೆಸಿ ಎಂದು ಹೇಳಿದರು.
ಬೆಂಗಳೂರು ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಸಂಸ್ಥೆ ಪಿಜಿಡಿಹೆಚಪಿ ಪ್ರಾಂಶುಪಾಲ ಡಾ ಶಶಿಕಾಂತ್ ರಾವ್ ಮಾತನಾಡಿ ಹೆಣ್ಣು ತಾಯಿಯಾಗಿ ತಂಗಿ ಅಕ್ಕ ಹೆಂಡತಿ ಆಗಬೇಕು ಮಗಳಾಗಿ ಬೇಡವೇ ಸಮಾಜದಲ್ಲಿ ಅನಿಷ್ಠ ಪದ್ಧತಿ ಹೋಗಬೇಕು. ಹೆಣ್ಣು-ಗಂಡು ಸಮಾನವಾಗಿ ಪ್ರೀತಿಸಬೇಕು ಗೌರವಿಸಬೇಕು ಎಂದು ಹೇಳಿದರು.
ಮತ್ತೋರ್ವ ನ್ಯಾಯಾಧೀಶರಾದ ಹುಲುಗಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಾಧಿಕಾರಿ ಡಾ ಪ್ರಶಾಂತ್ ಧೂಮಗೊಂಡು ಮಾತನಾಡಿ ಹೆಣ್ಣು ಬೂರ್ಣ ಪತ್ತೆಹಚ್ಚುವ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹಾಗೂ ಪ್ರಸವ ಪೂರ್ವ ಲಿಂಗ ಪತ್ತೆ ಹಚ್ಚುವ ಗರ್ಭಿಣಿಯರ ಮೇಲೆ ನಿಗಾ ಇಡಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಗರ್ಭಿಣಿ ತಾಯಂದಿರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಮದ್ದಾನಿ ಮಾರಾಜರು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸುಭದ್ರಮ್ಮ ವಹಿಸಿದ್ದರು. ಸಂಗಣ್ಣ ಹೊಸೂರ ಉಪಾಧ್ಯಕ್ಷರು ಸೀಮಂತ ಕಾರ್ಯಕ್ರಮ ಚಾಲನೆ ನೀಡಿದರು. ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ, ಅತನೂರ, ಐಸಿಡಿಎಸ್ ಮೇಲ್ವಿಚಾರಕರು ಪಾಟೀಲ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.