ಫೆಬ್ರುವರಿ
೨೩ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ
.ಇಂಡಿ: ವಿಜಯಪೂರ ನಗರದಲ್ಲಿ ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಮೋಚಿಗಾರ ಕ್ಷೇಮಾಭಿವೃರ್ಧಧಿ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ, ನ್ಯಾಯವಾದಿ ಬಸವರಾಜ್ ಬಡದಾಳ ಮಾತನಾಡಿ, ಸಂಘದ ವತಿಯಿಂದ ಫೆಬ್ರುವರಿ ೨೩ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಆಚರಿಸಲು ನಿರ್ಧರಿಸಲಾಗಿದೆ. ಸಮಾಜದ ಅವಿಭಾಜ್ಯ ಅಂಗವಾಗಿರುವ ಹನುಮಂತ ದೇವರು ಪೊಲೀಸ್ ಪರೇಡ ಗ್ರೌಂಡ್ ಹತ್ತಿರವಿರುವ ಗುಡಿ ಮತ್ತು ಸಮಾಜದ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಟ್ರಸ್ಟ್ನವರು ಕಾರ್ಯಕ್ರಮ ಮಾಡಲು ಸ್ಥಳ ಕೊಡುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿಸಿದ್ದಾರೆ. ನಮ್ಮ ಸಮಾಜವು ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಭಾಕರ್ ಮಂಡೋಲಿ, ಅನುಸೂಯ ಮದರಿ, ಚೇತನಕುಮಾರ್ ಮದರಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ವಿಜಯಪೂರ ನಗರದಲ್ಲಿ ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಮೋಚಿಗಾರ ಕ್ಷೇಮಾಭಿವೃರ್ಧಧಿ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.