ಇಂಡಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಫೆ -8 & 9 ಜಾನಪದ ಉತ್ಸವ
ಇಂಡಿ : ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಫೆ-8 ಮತ್ತು 9 ರಂದು ಜಾನಪದ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಂಶುಪಾಲರು ರಮೇಶ್ ಎಚ್ ಆರ್ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಾಂಸ್ಕತಿಕ ವಿಭಾಗ, ಕನ್ನಡ ವಿಭಾಗ ಹಾಗೂ ಐ ಕ್ಯೂ ಎ ಸಿ ಸಹಯೋಗದಲ್ಲಿ ಜರುಗುವ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ “2025 ನೇ ಸಾಲಿನ ಜಾನಪದ ಉತ್ಸಹ” ಕಾರ್ಯಕ್ರಮದಲ್ಲಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಕೆ.ಎ.ಎಸ್ ಸುಪರ್‌ಟೈಮ್ ಶ್ರೇಣಿ ಮುಖ್ಯ ಆಡಳಿತಾಧಿಕಾರಿಗಳು ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ಧಾರವಾಡ ಅವರು ಭಾಗವಹಿಸಿ ಉದ್ಘಾಟಿಸಿಲ್ಲಿದ್ದಾರೆ.
ಅಧ್ಯಕ್ಷತೆ ಪ್ರೋ. ರಮೇಶ ಆರ್. ಎಚ್. ಪ್ರಾಂಶುಪಾಲರು ವಹಿಸಿಕೊಳ್ಳಲಿದ್ದಾರೆ. ಇನ್ನೂ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷರು ವಿಜಯಪುರ ಎಸ್. ಬಿ. ಕಂಬೋಗಿ ಅವರು ವಹಿಸಲಿದ್ದಾರೆ. ಉಪಸ್ಥಿತಿ ಪ್ರೋ. ರವಿಕುಮಾರ ಅರಳಿ, ಸಂಯೋಜಕರು ಪ್ರೋ. ಸಂಗಮೇಶ ಹಿರೇಮಠ, ಸಂಚಾಲಕರು, ಸಾಂಸ್ಕೃತಿಕ ವಿಭಾಗ ಉಪಸ್ಥಿತರಿರವರು ಎಂದು ತಿಳಿಸಿದ್ದಾರೆ.