ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್ ಮಾಡುತ್ತಿದೆ: ಸಚಿವ ದರ್ಶನಾಪೂರ
ಮನಿಯಾರ ಚಾರಿಟಬಲ್ ಟ್ರಸ್ಟ್ ನಿಂದ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧಿ ವಿತರಣೆ .
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಹೊರವಲಯದ ಬಿದರಕುಂದಿಯ ಮನಿಯಾರ ಶಾಲಾ ಆವರಣದಲ್ಲಿ ಮನಿಯಾರ ಚಾರಿಟಬಲ್ ಟ್ರಸ್ಟ್ ನಿಂದ ಸೋಮವಾರ ಹಮ್ಮಿಕೊಂಡ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಕೆಎಸ್ಡಿ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ ಸಿರಿವಂತಿಕೆ ಎಲ್ಲರಲ್ಲೂ ಬಂದರೂ ಜನಸೇವೆ ಮಾಡುವ ಗುಣಬೇಕು ಅಯೂಬ್ ಮನಿಯಾರ್ ಅವರು ಪ್ರತಿ ವರ್ಷವೂ ನೂರಾರು ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಂಡು ಜನಸೇವೆ ಮಾಡುತ್ತಿರುವುದು ಶ್ಲಾಘನೀಯವೆಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಪ್ರಭುಗೌಡ ಪಾಟೀಲ್ ಮಾತನಾಡಿ ಧರ್ಮಾತೀತ ಜಾತ್ಯತೀತ ಪಕ್ಷಾತೀತವಾಗಿ ಸಮಾಜಮುಖಿ ಕಾರ್ಯಗಳನ್ನು ಮನಿಯಾರ ಚಾರಿಟಬಲ್ ಟ್ರಸ್ಟ್ ನಿಂದ ಅಯೂಬ್ ಮನಿಯಾರ ಮಾಡಿದ್ದಾರೆಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಆಲಮೇಲ ವಿರಕ್ತಮಠದ ಶ್ರೀ ಜಗದೇವ ಮಲ್ಲಿಬೋಮ್ಮ ಮಹಾಸ್ವಾಮಿಗಳು, ಪ್ರವಚನಕಾರ ಲಾಲಹುಸೇನ ಕಂದಗಲ್ ಮಾತನಾಡಿ ದಾನಮಾಡುವ ದಾನಿಯ ಆ ಧನಮಾತ್ರ ಶಾಶ್ವತ ಮಿತ್ರ ಜನಸೇವೆಯಲ್ಲಿಯ ನೆಮ್ಮದಿ ಬೇರಲ್ಲೂ ಸಿಗುವುದಿಲ್ಲವೆಂದರು.
ಮನಿಯಾರ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ್ ಮನಿಯಾರ್ ಮಾತನಾಡಿ ಅಗಲಿದ ನನ್ನ ತಂದೆತಾಯಿಗಳ ಸ್ಮರಣಾರ್ಥ ನನ್ನಿಂದಾಗುವ ಸೇವಾ ಕಾರ್ಯಗಳನ್ನು ನನ್ನ ದುಡಿಮೆಯ ಹಣದ ಒಂದು ಭಾಗದಲ್ಲಿ ಮಾಡುತ್ತಾ ಬರುತ್ತಿರುವೆ ಜನಸೇವೆಯಲ್ಲಿ ಹಿರಿಯರ ಕಣ್ಣಿನ ಶಸ್ತ್ರಚಿಕಿತ್ಸೆಮಾಡಿಸುವ ಮೂಲಕ ನನ್ನ ತಂದೆ ತಾಯಿಗಳನ್ನು ನಿಮ್ಮಲ್ಲಿ ಕಾಣುತ್ತಿರುವೆ ಎಂದರು .
ಮುದ್ದೇಬಿಹಾಳ, ನಾಲತವಾಡ ತಾಳಿಕೋಟಿಯ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೂಂಡ ೨೦೦ ಫಲಾನುಭವಿಗಳಿಗೆ ಉಚಿತ ಕನ್ನಡಕ ಔಷಧಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕರಗೌಡ ಹೊಸಮನಿ, ರೂಪಸಿಂಗ್ ಲೋನಾರೆ, ಮದನಸಾಬ ಸಾಲೋಡಗಿ, ಮಹೆಬೂಬ ಗೊಳಸಂಗಿ, ಅಬ್ದುಲ್ ಗಣಿ ಖಾಜಿ, ಡಾ.ಎ.ಎ ನಾಲಬಂದ, ಎಂ ಎನ್ ಠಾಣೆ ಆಪ್ತಾಪ್ ಮನಿಯಾರ, ಆಯ್ ಎಲ್ ಮಮದಾಪೂರ, ಹಾಜಿಮಲಂಗ ಎಕೀನ್, ದಾದಾ ಎತ್ತಿನಮನಿ ಸೇರಿದಂತೆ ಅನೇಕ ಗಣ್ಯಮಾನ್ಯರು ಫಲಾನುಭವಿಗಳು ಭಾಗವಹಿಸಿದ್ದರು . ಮುಜಾಹಿದಿನ್ ನಮಾಜಕಟ್ಟಿ ಸ್ವಾಗತಿಸಿದರು,ಶೃತಿ ಜಾಧವ ನಿರೂಪಿಸಿ ವಂದಿಸಿದರು.