ಲಿಂಗಸೂಗೂರು: ಒಂದು ಕಡೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇತ್ತ ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ನೀರು ಸಿಗುತ್ತಿಲ್ಲಾ ಅಂತಾ ಹೋರಾಟ ನಡೆಸಿದ್ದಾರೆ.
ರೈತರ ಜೀವನಾಡಿಯಾಗಿರುವ ರಾಂಪೂರ ಏತ ನೀರಾವರಿಯಿಂದ ಹರಿಯುವ ನೀರು ಬಹುತೇಕ ಹಳ್ಳಿಗಳ ರೈತರ ಜೀವನ ಪಾಲಿನ ಕಾಮಧೇನುವಾಗಿದೆ. ಈ ಮಧ್ಯೆ 15 ಹಳ್ಳಿಗಳ ರೈತರು ಮುಂದಿನ ಒಂದು ವಾರದ ವರೆಗೆ ಕಾಲುವೆ ನೀರು ಹರಿಸುವಂತೆ ಅಧಿಕಾರಿಗಳ ಎದುರು ಹೋರಾಟ ನಡೆಸಿದ್ದಾರೆ.
ಹೌದು ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಹುತೇಕ ಹಳ್ಳಿಗಳ ರೈತರು ರಾಂಪೂರ ಏತ ನೀರಾವರಿಯ ನೀರನ್ನು ಅವಲಂಭಿಸಿ ಕೃಷಿ ಮಾಡುತ್ತಿದ್ದಾರೆ.
ಇನ್ನು ರೈತರು ಕಾಲುವೆಯ ನೀರುನ್ನು ನಂಬಿಕೊಂಡು ಬೇಸಿಗೆಯ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಕಾಲವೆಯಲ್ಲಿ ನೀರು ಬರದೆ ರೈತ ಬೆಳೆದ ಬೆಳೆ ಬೇಸಿಗೆ ಬಿಸಿಲಿಗೆ ಕಂದಿ ಹೋಗುತ್ತಿದೆ.
ಇನ್ನು ಸಕರಾತ್ಮವಾಗಿ ಸ್ಪಂದಿಸದ ಅಧಿಕಾರಿಗಳ ಹಾಗೂ ಸರ್ಕಾರ ವಿರುದ್ಧ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಡಿವೈ ಎಸ್ ಪಿ ಆಫೀಸ್ ಎದುರು ಆಕ್ರೋಶ ಹೊರಹಾಕಿದ್ದಾರೆ.
ರೈತರ ಬೇಡಿಕೆಯಂತೆ ಸರಿಯಾದ ನಿಟ್ಟಿನಲ್ಲಿ ಒಂದು ವಾರದವರೆಗೆ ಕಾಲುವೆಗೆ ನೀರು ಹರಿಸದಿದ್ದರೆ
ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಸಾವಿರಾರು ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ವರದಿ: ವೀರೇಶ್ ಅರಮನಿ ವಾಯ್ಸ್ ಆಫ್ ಜನತಾ.