ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ತಾಲೂಕಿನ ಅನೇಕ ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಕೊರತೆಯ ನಡೆವೆಯೂ ಕಾಳಸಂತೆಯಲ್ಲಿ ಮಾರಾಟ ಜೋರಾಗಿದೆ ದುಪ್ಪಟ್ಟು ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದಾರೆಂದು ರೈತ ಮುಖಂಡ ತಾಲೂಕ ಕಾರ್ಯದ್ಯಕ್ಷ ಬಿ.ಬಿ ಪಾಟೀಲ್ ಹಿರೇಮುರಾಳ ಹೇಳಿದರು. ಅವರು ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ರೈತರಿಗೆ ಬಿತ್ತನೆಗೆ ಸಕಾಲದಲ್ಲಿ ರಸಗೊಬ್ಬರ ಡಿಎಪಿ ಯೂರಿಯಾ ಪೂರೈಸಲು ಆಗ್ರಹಿಸಿ ತಹಶಿಲ್ದಾರ ಹಾಗೂ ತಾಲೂಕು ಕೃಷಿ ಇಲಾಖೆಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು.
ನಮ್ಮ ಭಾಗದ ರೈತರು ಮುಂಗಾರು ಹಂಗಾಮಿ ಬಿತ್ತನೆಗೆ ಭೂಮಿ ಹದಮಾಡಿಕೂಂಡಿದ್ದಾರೆ 11 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಯೂರಿಯಾ ಡಿಎಪಿ ಬಿತ್ತನೆಗೆ ಅವಶ್ಯಕತೆ ಇದೆ ಸರಕಾರ ಈ ಕೂಡಲೇ ರೈತರಿಗೆ ರಸಗೊಬ್ಬರ ಪೂರೈಸಬೇಕು ಮತ್ತು ಕಾಳಸಂತೆಯಲ್ಲಿ ದುಬಾರಿ ಹಣಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾಗಿ ಆರೋಪಿಸಿದರು.
ಕೃಷಿ ಸಹಾಯಕ ನಿರ್ದೇಶಕ ಎಸ್ ಡಿ ಬಾವಿಕಟ್ಟಿ ಮನವಿ ಸ್ವೀಕರಿಸಿ ತಾಲೂಕಿನಲ್ಲಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೂಳ್ಳಲಾಗುತ್ತದೆ , ಹಾಗೂ ನ್ಯಾನೋ ಗೊಬ್ಬರ ಕುರಿತು ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ ಪ್ರತಿ ಒಬ್ಬ ರೈತನಿಗೆ ೨ ಚೀಲ ರಸಗೊಬ್ಬರ ನೀಡಲು ನಿರ್ದೇಶನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಅಯ್ಯಪ್ಪ ಬಿದರಕುಂದಿ, ಗುರುಸಂಗಪ್ಪ ಹಂಡರಗಲ್ಲ ,ವೈ ಎಲ್ ಬಿರಾದಾರ ಬಾಲಪ್ಪ ಬಿಸಲದಿನ್ನಿ, ವೀರಪ್ಪ ಮಡಿವಾಳರ, ಬಸವರಾಜ ಹಿರೇಮಠ, ರಾಜಶೇಖರ ದೂಡಮನಿ, ಬಸವರಾಜ ಬ್ಯಾಲ್ಯಾಳ, ಭಾಗವಹಿಸಿದರು.