ಮುದ್ದೇಬಿಹಾಳ: ಟ್ರ್ಯಾಕ್ಟರ್ ಇಂಜಿನ್ ಹಿಂಬದಿ ಅಳವಡಿಸಿದ್ದ ಕಬ್ಬಿಣದ ಕುಂಟೆ ಬಡಿದು ರೈತ ಸಾವೊಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಗ್ರಾಮದಲ್ಲಿ ನಡೆದಿದೆ. 48 ವರ್ಷದ ರೈತ ಮಲ್ಲಣ್ಣ ಎರೆಡ್ಡಿ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. ಚಾಲಕ ಟ್ರ್ಯಾಕ್ಟರನ್ನು ತಿರುಗಿಸಿದಾಗ ಹಿಂದೆ ಇದ್ದ ಕಬ್ಬಿಣದ ಕುಂಟೆ ನೇಗಿಲು ಬಡಿದು ದುರಂತ ಸಂಭವಿಸಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.