ಲಿಂಗಸಗೂರ್: ಭೀಕರ ಭರದ ಮಧ್ಯೆ ರೈತರಿಗೆ ಜೆಸ್ಕಾಂ ಇಲಾಖೆ ಶಾಕ್ ನೀಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಪವರ್ ಇಲ್ಲದೆ ಬೆಳೆಗಳಿಗಳಿಗೆ ನೀರು ಹಾಯಿಸಲು ರೈತರು ಪರದಾಡುತ್ತಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಯ್ಯಪೂರ ಉಪ ಕೆ ಇ ಬಿ ಗೆ 40 ಕ್ಕೂ ಹೆಚ್ಚು ರೈತರು ಮುತ್ತಿಗೆ ಹಾಕಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರೈತರು ಹತ್ತಿ, ಕಬ್ಬು, ತೊಗರಿ, ಮೆಣಸಿನಸಿನಗಿಡ, ಮೆಕ್ಕೆಜೋಳ, ಸಜ್ಜೆ ಬೆಳೆಗಳಿಗೆ ನೀರು ಹಾಯಿಸಲು ಬೊಗಾಪೂರ, ನಾಗರಹಾಳ, ಪಲಗಲ್ಡಿನ್ನಿ, ಹಲ್ಕಾವಟಗಿ, ತೊಂಡಿಹಾಳ, ಅಂಕನಾಳ, ಉಪನಾಳ ಭಾಗದ ರೈತರು ಕರೆಂಟ್ ಇಲ್ಲದೆ ಪರದಾಡುತ್ತಿದ್ದಾರೆ.
15 ದಿನಗಳಿಂದ ಟಿ ಸಿ ಸುಟ್ಟರೂ ದುರಸ್ತಿಗೊಳಿಸದ ಜೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.
ಇತ್ತ ಪೊಲೀಸ್ ಇಲಾಖೆ ಅಧಿಕಾರಿಗಳ ಕೆ ಇ ಬಿ ಮುಂಭಾಗದಲ್ಲಿ ರೈತರ ಮನವೊಲಿಕೆಗೆ ಮುಂದಾದರೂ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಬರುವ ವರೆಗೂ ಜಾಗ ಬಿಟ್ಟು ಕದಲುವದಿಲ್ಲ ಎಂದು ರೈತರ ಪಟ್ಟು ಹಿಡಿದಿದ್ದಾರೆ.